Home News Chikkaballapur Chikkaballapur : ‘ಸಿರಿಧಾನ್ಯ’ ಮತ್ತು ‘ಮರೆತು ಹೋದ ಖಾದ್ಯ’ಗಳ ಪಾಕ ಸ್ಪರ್ಧೆ

Chikkaballapur : ‘ಸಿರಿಧಾನ್ಯ’ ಮತ್ತು ‘ಮರೆತು ಹೋದ ಖಾದ್ಯ’ಗಳ ಪಾಕ ಸ್ಪರ್ಧೆ

0
29
chikkaballapur millet forgotten dishes cooking competition 2025

Chikkaballapur : ಚಿಕ್ಕಬಳ್ಳಾಪುರ: ಜಿಲ್ಲೆಯ ಆಹಾರ ಸಂಸ್ಕೃತಿಯನ್ನು ಮರುಪರಿಚಯಿಸಲು ಮತ್ತು ಸಿರಿಧಾನ್ಯಗಳ ಬಳಕೆಯನ್ನು ಉತ್ತೇಜಿಸಲು ಚಿಕ್ಕಬಳ್ಳಾಪುರ ಜಿಲ್ಲಾ ಕೃಷಿ ಇಲಾಖೆಯು ಜಿಲ್ಲಾ ಮಟ್ಟದ ‘ಸಿರಿಧಾನ್ಯ’ ಮತ್ತು ‘ಮರೆತು ಹೋದ ಖಾದ್ಯಗಳ’ ಪಾಕ ಸ್ಪರ್ಧೆಯನ್ನು ಆಯೋಜಿಸಿದೆ. ಜಿಲ್ಲೆಯ ಎಲ್ಲಾ ಸಾರ್ವಜನಿಕರಿಗೆ ಈ ವಿಶಿಷ್ಟ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶ ನೀಡಲಾಗಿದೆ.

ಸ್ಪರ್ಧೆಯ ವಿಭಾಗಗಳು ಮತ್ತು ಬಹುಮಾನ: ಈ ಪಾಕ ಸ್ಪರ್ಧೆಯಲ್ಲಿ ಪ್ರಮುಖವಾಗಿ ಮೂರು ವಿಭಾಗಗಳಿದ್ದು, ಪ್ರತಿ ವಿಭಾಗದಲ್ಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆಯುವವರಿಗೆ ಆಕರ್ಷಕ ನಗದು ಬಹುಮಾನ ನೀಡಲಾಗುತ್ತದೆ.

  • ಪ್ರಥಮ ಬಹುಮಾನ: ₹ 5,000
  • ದ್ವಿತೀಯ ಬಹುಮಾನ: ₹ 3,000
  • ತೃತೀಯ ಬಹುಮಾನ: ₹ 2,000 (ಸಿಹಿ, ಖಾರ – ಸಿರಿಧಾನ್ಯ ಖಾದ್ಯಗಳಿಗೆ ಮಾತ್ರ ಮತ್ತು ಮರೆತು ಹೋದ ಖಾದ್ಯಗಳ ತಿನಿಸುಗಳಿಗೆ ಈ ಬಹುಮಾನ ಅನ್ವಯಿಸುತ್ತದೆ).

ಅರ್ಜಿ ಸಲ್ಲಿಸುವ ವಿಧಾನ: ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತರು ತಮ್ಮ ಭಾವಚಿತ್ರದೊಂದಿಗೆ ಹೆಸರು, ವಿಳಾಸ, ತಯಾರಿಸುವ ಖಾದ್ಯದ ಹೆಸರು, ಬೇಕಾಗುವ ಸಾಮಗ್ರಿಗಳು, ತಯಾರಿಕಾ ಸಮಯ ಮತ್ತು ತಯಾರಿಸುವ ವಿಧಾನದ ಸಂಕ್ಷಿಪ್ತ ಮಾಹಿತಿಯನ್ನು ಒಳಗೊಂಡ ಅರ್ಜಿಯನ್ನು ಡಿಸೆಂಬರ್ 24 ರೊಳಗೆ ಸಲ್ಲಿಸಬೇಕು.

ಅರ್ಜಿ ಸಲ್ಲಿಸಬೇಕಾದ ವಿಳಾಸ: ಅರ್ಜಿಗಳನ್ನು ಇ-ಮೇಲ್ ಮೂಲಕ (jdacbp2025@yahoo.com ಅಥವಾ jdacbp@gmail.com) ಕಳುಹಿಸಬಹುದು. ಅಥವಾ ಖುದ್ದಾಗಿ/ಅಂಚೆ ಮೂಲಕ ‘ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕೆ.ಎಸ್.ಎಸ್.ಸಿ ಕಚೇರಿ ಆವರಣ, ಬಿ.ಬಿ ರಸ್ತೆ, ಚಿಕ್ಕಬಳ್ಳಾಪುರ-562101’ ಈ ವಿಳಾಸಕ್ಕೆ ತಲುಪಿಸಬಹುದು.

ಅರ್ಜಿಯಲ್ಲಿ ನಮೂದಿಸಿದ ತಿನಿಸುಗಳನ್ನು ಮನೆಯಲ್ಲಿಯೇ ತಯಾರಿಸಿಕೊಂಡು ಬಂದು ಡಿಸೆಂಬರ್ 29 ರಂದು ಬೆಳಿಗ್ಗೆ 10 ಗಂಟೆಗೆ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಪ್ರದರ್ಶಿಸಬೇಕು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!