- Advertisement -
- Advertisement -
- Advertisement -
- Advertisement -
Chikkaballapur : ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಯಡಿ ರಾಗಿ ಖರೀದಿಸುವಂತೆ ರೈತ ಸಂಘದ ಮುಖಂಡರು ಜಿಲ್ಲಾಧಿಕಾರಿ ಆರ್.ಲತಾ (Deputy Commissioner R. Latha) ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿ ವರ್ಷ ಮಾರ್ಚ್ 31 ರವರೆಗೆ ನೋಂದಣಿಗೆ ಗಡುವು ನೀಡಲಾಗುತ್ತಿತ್ತಾದರೆ ಈ ಬಾರಿ ಜನವರಿ 21 ಕ್ಕೆ ನೋಂದಣಿ ಸ್ಥಗಿತಗೊಳಿಸಿದ್ದಾರೆ. ಸರ್ವರ್ ಸಮಸ್ಯೆಯಿಂದ ಬಹುತೇಕ ರೈತರು ಹೆಸರು ನೋಂದಾಯಿಸಿಲ್ಲ. ಆದ್ದರಿಂದ ಮತ್ತೆ ನೋಂದಣಿಯನ್ನು ಆರಂಭಿಸಬೇಕು ಎಂದು ಮನವಿ ಮಾಡಿದರು.
ರೈತ ಸಂಘದ ಜಿಲ್ಲಾ ಅಧ್ಯಕ್ಷ ಮುನಿಕೆಂಪಣ್ಣ, ಜಿಲ್ಲಾಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಕಾರ್ಯಾಧ್ಯಕ್ಷ ಎಚ್.ಎನ್.ಕದೀರೇಗೌಡ, ಭೀಮಣ್ಣ, ಡಿ.ವಿ.ನಾರಾಯಣಸ್ವಾಮಿ, ಮುನೇಗೌಡ ಮತಿತ್ತರರು ಉಪಸ್ಥಿತರಿದ್ದರು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur
- Advertisement -