- Advertisement -
- Advertisement -
- Advertisement -
- Advertisement -
Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಗಿರಿಧಾಮದ ರಸ್ತೆಯ ಸರಪಳಿ 2.50 ಕಿ.ಮೀ ತಿರುವು 8ರಲ್ಲಿ ಕಳೆದ ತಿಂಗಳು ಸುರಿದ ಭಾರಿ ಮಳೆಯಿಂದ ಉಂಟಾದ ಗುಡ್ಡಕುಸಿತದಿಂದ ಹಾಳಾಗಿದ್ದ ನಂದಿಗಿರಿಧಾಮ ರಸ್ತೆ ದುರಸ್ತಿ ಕಾಮಗಾರಿಗೆ ರಾಜ್ಯ ಸರ್ಕಾರ ₹ 80 ಲಕ್ಷ ಬಿಡುಗಡೆ ಮಾಡಿದೆ. ಹಾಳಾದ ರಸ್ತೆಯಿಂದಾಗಿ ನಂದಿ ಗಿರಿಧಾಮಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು.
ಕೊಚ್ಚಿ ಹೋಗಿರುವ ರಸ್ತೆ ಅಡ್ಡ ಮೋರಿ ಹಾಗೂ ತಡೆಗೋಡೆ ಮರು ನಿರ್ಮಾಣ ಕಾಮಗಾರಿಗೆ ರಾಜ್ಯ ಸರ್ಕಾರ ಈಗ ಹಣ ಬಿಡುಗಡೆ ಮಾಡಲಾಗಿದೆ.
ಮಂಜೂರಾದ ಅನುದಾನದ ಮಿತಿಯ ಒಳಗೆ ಕಾಮಗಾರಿಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದ್ದು, ಕಾಮಗಾರಿಯನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದೆ.
- Advertisement -