Chikkaballapur : ಚಿಕ್ಕಬಳ್ಳಾಪುರ ನಗರದ ಹಳೆಯ ಸರ್ಕಾರಿ ಆಸ್ಪತ್ರೆ (Government Hospital) ಆವರಣದಲ್ಲಿ ವಿಶ್ವ ಶುಷ್ರೂಷಕರ ದಿನಾಚರಣೆಯನ್ನು (International Nurses Day) ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸರ್ಕಾರಿ ಮೆಡಿಕಲ್ ಕಾಲೇಜಿನ ಡೀನ್ ವಿಶೇಷಾಧಿಕಾರಿ ಡಾ. ಸಿದ್ದಿಕ್ ಮುಕಂಮಲ್ ” ತಾಯಿಯಂತೆ ಪ್ರತಿಯೊಬ್ಬ ರೋಗಿಗೂ ಸೇವೆ ಸಲ್ಲಿಸುವ ಶುಷ್ರೂಷಕರ ಸೇವೆ ಅಪಾರ. ಮಾರಕ ಕೊರೊನಾ ಸೋಂಕಿನ ಆತಂಕದ ನಡುವೆಯೂ ನಿಷ್ಠೆ ಮತ್ತು ನಿಸ್ವಾರ್ಥ ಭಾವನೆಯಿಂದ ಶುಷ್ರೂಷಕಿಯರು ಸೇವೆ ಸಲ್ಲಿಸಿದರು. ಎಲ್ಲರ ಆರೋಗ್ಯ ಕಾಪಾಡಲು ಹಗಲಿರುಳು ಶ್ರಮಿಸುವ ಅವರ ಔದಾರ್ಯ ದೊಡ್ಡದು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ. ರಮೇಶ್ ಪಿ.ವಿ., ಡಾ. ವಿಜಯಾ, ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರೋ ಸೈಯದ್ ಸಮೀವುಲ್ಲಾ ಮಾತನಾಡಿದರು. ಪ್ರೊ. ಪದ್ಮ, ಪ್ರೊ. ಶಾಂತಿ, ಪ್ರೊ. ಶ್ರೇಯ್ಯಾ, ಸುಪ್ರಿತಾ ಮತ್ತಿತರರು ಉಪಸ್ಥಿತರಿದ್ದರು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur