Friday, April 19, 2024
HomeChikkaballapurಚಿಕ್ಕಬಳ್ಳಾಪುರ ಉತ್ಸವ ಲೋಗೊ ಬಿಡುಗಡೆ

ಚಿಕ್ಕಬಳ್ಳಾಪುರ ಉತ್ಸವ ಲೋಗೊ ಬಿಡುಗಡೆ

- Advertisement -
- Advertisement -
- Advertisement -
- Advertisement -

Chikkaballapura : ಚಿಕ್ಕಬಳ್ಳಾಪುರ ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಉತ್ಸವಕ್ಕೆ (Chikkaballapura Utsava) ಸಂಬಂಧಿಸಿದ ಲೋಗೊ (Logo) ಬಿಡುಗಡೆಗೊಳಿಸಲಾಯಿತು (Release) .

ಲೋಗೋ ಅನಾವರಣಗೊಳಿಸಿ ಮಾತನಾಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ “ಜನವರಿ 7 ರಿಂದ ಜನವರಿ 14 ರವರೆಗೆ ಚಿಕ್ಕಬಳ್ಳಾಪುರ ನಗರದಲ್ಲಿ ಚಿಕ್ಕಬಳ್ಳಾಪುರ ಉತ್ಸವ ನಡೆಯಲಿದ್ದು ಪಕ್ಷಾತೀತವಾಗಿ ಮತ್ತು ಜಾತ್ಯತೀತವಾಗಿ ಎಲ್ಲಾರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಕಾರ್ಯಕ್ರಮದಲ್ಲಿ ಯುವಕರಿಗೆ, ಸರ್ಕಾರಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಮಹಿಳೆಯರಿಗೆ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಬಹುಮಾನಕ್ಕಾಗಿಯೇ ₹ 1 ಕೋಟಿ ಮೀಸಲಿಡಲಾಗಿದೆ. 8 ರಿಂದ 14 ರವರೆಗೆ ನಿತ್ಯ ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಇಂಧನ, ಪ್ರವಾಸೋದ್ಯಮ, ತೋಟಗಾರಿಕೆ ಇಲಾಖೆ ಸಚಿವರ ಜತೆಯೂ ಮಾತನಾಡಿದ್ದೇನೆ. ನಮ್ಮ ಪ್ರತಿಷ್ಠಾನ ಮತ್ತು ವಿವಿಧ ಸಂಘ ಸಂಸ್ಥೆಗಳು ಸೇರಿ ಕಾರ್ಯಕ್ರಮವನ್ನು ಆಚರಿಸಲಾಗುವುದು. 7 ದಿನಗಳ ಕಾಲ ಚಿಕ್ಕಬಳ್ಳಾಪುರದಲ್ಲಿ ಹಬ್ಬದ ವಾತಾವರಣ ಇರಲಿದ್ದು ಕಲೆ, ಕ್ರೀಡೆ ಮತ್ತು ಮನರಂಜನೆಯ ಸ್ಪರ್ಧೆಗಳು ನಡೆಯಲಿವೆ. ಅಂಗವಿಕಲರಿಗೂ ಕ್ರೀಡಾ ಸ್ಪರ್ಧೆಗಳಿವೆ. ವಿಶೇಷವಾಗಿ ಹೊರ ಜಿಲ್ಲೆಯ ಜನರು ಸಹ ಉತ್ಸವದಲ್ಲಿ ಭಾಗಿಯಾಗುವರು” ಎಂದು ತಿಳಿಸಿದರು.

ಜಿಲ್ಲೆ ರಚನೆಯಾಗಿ 15 ವರ್ಷವಾಗಿದ್ದು ಬರದ ನಾಡು ಎನಿಸಿರುವ ಜಿಲ್ಲೆಯಲ್ಲಿ ಎಲ್ಲ ಕರೆಗಳು ತುಂಬಿವೆ. ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಉತ್ಸವ ಮಾಡಲು ಅನುಕೂಲ ಮಾಡಿಕೊಡಿ ಎಂದು ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದಾಗ ಅವರು ಮುಖ್ಯಮಂತ್ರಿ ವಿಶೇಷ ನಿಧಿಯಿಂದ ಉತ್ಸವಕ್ಕೆ ₹ 2 ಕೋಟಿ ನೀಡಿದ್ದಾರೆ ಮತ್ತು ಉತ್ಸವದ ಉದ್ಘಾಟನೆ ಅಥವಾ ಸಮಾರೋಪದಲ್ಲಿ ಅವರು ಭಾಗಿಯಾಗಲಿದ್ದಾರೆ. ಹಂಪಿ ಉತ್ಸವ, ಮೈಸೂರು ದಸರಾ, ಕಿತ್ತೂರು ಉತ್ಸವದ ಮಾದರಿಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಉತ್ಸವ ನಡೆಸಿ ಜಿಲ್ಲೆಯ ಸಾಧಕರು, ಕವಿಗಳು, ಸಂತರನ್ನು ಸ್ಮರಿಸಲಾಗುವುದು. ಸರ್ಕಾರದ ಎಲ್ಲ ಇಲಾಖೆಯ ವಸ್ತು ಪ್ರದರ್ಶನಗಳ ಇರುತ್ತವೆ ಎಂದು ಸಚಿವರು ಹೇಳಿದರು.

ಜಿಲ್ಲಾಧಿಕಾರಿ ಎನ್‌.ಎಂ.ನಾಗರಾಜ್, ಜಿಲ್ಲಾ ಪಂಚಾಯಿತಿ ಸಿಇಒ ಪಿ.ಶಿವಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್, ಬಿಎಂಸಿಟಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್, ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿರಿದ್ದರು.

For Daily Updates WhatsApp ‘HI’ to 7406303366

- Advertisement -
RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!