Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು (Devaramallur) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಗ್ರಾಮ ಸಭೆ (Children’s Grama Sabha) ನಡೆಸಿ ಶಾಲೆಗೆ, ಮಕ್ಕಳಿಗೆ ಅಗತ್ಯತೆಗಳನ್ನು ಮಕ್ಕಳಿಂದಲೇ ಕೇಳಿ ಮಾಹಿತಿ ಸಂಗ್ರಹಿಸಲಾಯಿತು.
FES ಸಂಸ್ಥೆ ಮತ್ತು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸಮಗ್ರ ಶಾಲಾಭಿವೃದ್ಧಿಗೆ ಪೂರಕವಾಗಿ ಮಕ್ಕಳ ಗ್ರಾಮ ಸಭೆ ನಡಿಸಿದಾಗ, ಆಟದ ಮೈದಾನ, ಶೌಚಾಲಯ ದುರಸ್ತಿ, ಸ್ಮಾರ್ಟ್ ಶಾಲೆ ಪ್ರಾರಂಭಕ್ಕೆ ಒತ್ತು, ಶಾಲಾ ಕೊಠಡಿ ನಿರ್ಮಾಣ, ನಲಿಕಲಿ ಮಕ್ಕಳಿಗೆ ಕೂರಲು ರೌಂಡ್ ಟೇಬಲ್ ವ್ಯವಸ್ಥೆ, ಕ್ರೀಡಾ ಸಾಮಾಗ್ರಿ, ಜಾನಪದ ಕಲೆಗಳ ಕಲಾ ತರಬೇತಿ, ಶಾಲಾ ಶತಮಾನೋತ್ಸವ ಕಾರ್ಯಕ್ರಮ, ಶಾಲಾ ಕಟ್ಟಡಗಳ ದುರಸ್ತಿ, 100 ವರ್ಷ ದಾಟಿ ಅವನತಿ ಹಂಚಿನಲ್ಲಿರುವ ಹಳೆಯ ಶಾಲಾ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣ ಸೇರಿದಂತೆ ಹಲವು ಸಮಸ್ಯೆಗಳನ್ನು ಮಕ್ಕಳಿಂದ ಗ್ರಾಮ ಪಂಚಾಯ್ತಿ ಸಂಪನ್ಮೂಲ ವ್ಯಕ್ತಿ ವಿ.ಚನ್ನಕೃಷ್ಣ ಸಂಗ್ರಹ ಮಾಡಿ ಗ್ರಾಮ ಪಂಚಾಯಿತಿ ಯೋಜನಾ ಪಟ್ಟಿಯಲ್ಲಿ ಸೇರಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಬಿ.ವಿ.ಮಂಜುನಾಥ್ ಹಾಜರಿದ್ದರು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur