Gowdanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಂ.ಸಿ ಮತ್ತು ಹಳೇ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಶಾಲಾ ವಾರ್ಷಿಕೋತ್ಸವ – “ಚಿಣ್ಣರ ಸಂಭ್ರಮ” ಶನಿವಾರ ಸಂಜೆ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಅಕ್ಷರದಾಸೋಹ ಸಹಾಯಕ ನಿರ್ದೇಶಕ ಆಂಜನೇಯ ಮಾತನಾಡಿ,”ಈ ಶಾಲೆಗೆ ತಾಲ್ಲೂಕು ಮತ್ತು ಜಿಲ್ಲೆಯಲ್ಲೇ ಒಳ್ಳೆಯ ಹೆಸರಿದೆ. ರಾಜ್ಯದಲ್ಲಿ ಶಾಲಾ ವಾಹನ ಹೊಂದಿರುವ ಕೆಲವೇ ಸರ್ಕಾರಿ ಶಾಲೆಗಳಲ್ಲಿ ಗೌಡನಹಳ್ಳಿಯೂ ಒಂದು. ಈ ಶಾಲೆಯಲ್ಲಿ ಮಕ್ಕಳಿಗೆ ಊಟದ ಹಾಲ್ ನಿರ್ಮಾಣ, ಎಲ್.ಕೆ.ಜಿ ಮತ್ತು ಯು.ಕೆ. ಜಿ ತರಗತಿಗಳನ್ನು ನಡೆಸುತ್ತಿರುವುದು ತುಂಬಾ ವಿಶೇಷ. ಈ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಎಸ್.ಡಿ.ಎಂ.ಸಿ ಸಮಿತಿ, ಹಳೇ ವಿದ್ಯಾರ್ಥಿಗಳ ಸಂಘ ಮತ್ತು ಶಿಕ್ಷಕರ ಬಳಗ ಅಭಿನಂದನಾರ್ಹವಾಗಿದೆ. ಶಾಲೆಯಲ್ಲಿ ಮಕ್ಕಳ ದಾಖಲಾತಿ ಗಣನೀಯಾವಾಗಿ ಏರಿಕೆಯಾಗುತ್ತಿರುವುದು ಶಿಕ್ಷಣ ಇಲಾಖೆಗೆ ಹೆಮ್ಮೆ ಎನಿಸಿದೆ” ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಡಿ.ಮಂಜುನಾಥ್ ಮತ್ತು ವಿ.ವೆಂಕಟರೆಡ್ಡಿ ರವರು ಶಾಲೆಯ ಬಗ್ಗೆ ಮಾತನಾಡಿದರು. ಯು ಕೆ ಜಿ ತೇರ್ಗಡೆಯಾದ ಮಕ್ಕಳಿಗೆ ಪ್ರಮಾಣಪತ್ರಗಳನ್ನು ನೀಡಲಾಯಿತು. ವೇದಿಕೆ ಕಾರ್ಯಕ್ರಮದ ನಂತರ ಎಲ್ಲಾ ಮಕ್ಕಳು ವರ್ಣ ರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳ್ಳನ್ನು ನಡೆಸಿಕೊಟ್ಟು ಎಲ್ಲರನ್ನು ರಂಜಿಸಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಲಕ್ಷ್ಮೀಪತಿ, ಉಪಾಧ್ಯಕ್ಷೆ ಸುಮಾ, ಸದಸ್ಯರಾದ ವೆಂಕಟಶಿವ, ಸತ್ಯನಾರಾಯಣ, ರಘುನಾಥರೆಡ್ಡಿ, ಶ್ರೀನಿವಾಸ್, ಗ್ರಾಮ ಪಂಚಾಯತಿ ಸದಸ್ಯೆ ಸೌಮ್ಯಶ್ರೀ ಮಂಜುನಾಥ್, ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಚಂದ್ರು, ಸದಸ್ಯರಾದ ಗಜೇಂದ್ರ, ಚೌಡರೆಡ್ಡಿ, ಎನ್ ಪಿ ಎಸ್ ಅಧ್ಯಕ್ಷ ವಿ. ಗಜೇಂದ್ರ, ಚೌಡಪ್ಪ, ಮುಖ್ಯ ಶಿಕ್ಷಕ ಎಂ.ದೇವರಾಜ, ಶಿಕ್ಷಕರಾದ ವಿ. ಎಂ. ಮಂಜುನಾಥ್, ಎಚ್. ಬಿ. ಕೃಪಾ, ಎಸ್. ಎ. ನಳಿನಾಕ್ಷಿ, ಅತಿಥಿ ಶಿಕ್ಷಕರಾದ ದಿವ್ಯ, ಗೌತಮಿ, ವಿದ್ಯಾರಾಣಿ, ಮುನಿರಾಜು, ಸಿಬ್ಬಂದಿ ಗಾಯಿತ್ರಿ, ಅಡುಗೆಯವರಾದ ಯಶೋದ, ಗಾಯಿತ್ರಿ, ಶಾರದಾ, ಬೈರಕ್ಕ, ವಾಹನ ಚಾಲಕ ಮುನಿಕೃಷ್ಣಪ್ಪ, ಹಳೇ ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.