25.4 C
Bengaluru
Saturday, December 7, 2024

ಶಿಡ್ಲಘಟ್ಟ ತಾಲ್ಲೂಕಿನ ನಾಲ್ಕು ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಅಧಿಸೂಚನೆ

- Advertisement -
- Advertisement -

Sidlaghatta: ಅವಧಿ ಪೂರ್ಣಗೊಂಡಿರುವ ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿ, ಮಳಮಾಚನಹಳ್ಳಿ, ಹೊಸಪೇಟೆ, ಮತ್ತು ನಾಗಮಂಗಲ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅಧಿಸೂಚನೆ ಹೊರಡಿಸಿದ್ದಾರೆ.

ಚುನಾವಣೆ ವೇಳಾಪಟ್ಟಿ:

ನಾಮಪತ್ರ ಸಲ್ಲಿಸಲು ಕೊನೆಯ ದಿನ: ನವೆಂಬರ್ 27
ನಾಮಪತ್ರಗಳ ಪರಿಶೀಲನೆ: ನವೆಂಬರ್ 28
ನಾಮಪತ್ರ ಹಿಂಪಡೆಯಲು ಕೊನೆ ದಿನ: ನವೆಂಬರ್ 30
ಮತದಾನ: ಡಿಸೆಂಬರ್ 8 (ಬೆಳಿಗ್ಗೆ 7 ರಿಂದ ಸಂಜೆ 5ರ ವರೆಗೆ)
ಮರು ಮತದಾನ ಅಗತ್ಯವಿದ್ದಲ್ಲಿ: ಡಿಸೆಂಬರ್ 10
ಮತ ಎಣಿಕೆ: ಡಿಸೆಂಬರ್ 11 (ಬೆಳಿಗ್ಗೆ 8 ಗಂಟೆಯಿಂದ, ಶಿಡ್ಲಘಟ್ಟ ತಾಲ್ಲೂಕು ಕೇಂದ್ರದಲ್ಲಿ)
ನೀತಿ ಸಂಹಿತೆ ಜಾರಿ:
ನ.21ರಿಂದ ಡಿ.11ರವರೆಗೆ ಈ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಅನ್ವಯವಾಗುತ್ತದೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಗ್ರಾಮ ಪಂಚಾಯಿತಿಗಳ ವ್ಯಾಪ್ತಿ ಮತ್ತು ಚುನಾವಣೆ ಅಧಿಕಾರಿಗಳು:

ಭಕ್ತರಹಳ್ಳಿ ಗ್ರಾಮ ಪಂಚಾಯಿತಿ:

ವ್ಯಾಪ್ತಿಯ ಹಳ್ಳಿಗಳು: ಭಕ್ತರಹಳ್ಳಿ-1, ಭಕ್ತರಹಳ್ಳಿ-2, ಕಾಕಿಚೊಕ್ಕಂಡಹಳ್ಳಿ, ತೊಟ್ಲಿಗಾನಹಳ್ಳಿ

ಚುನಾವಣಾ ಅಧಿಕಾರಿ: ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರವಿ (Contact: 8296237136)
ಸಹಾಯಕ ಚುನಾವಣಾ ಅಧಿಕಾರಿ: ಮಳಮಾಚನಹಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಬೈರಾರೆಡ್ಡಿ (Contact: 9741422127)

ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ:

ವ್ಯಾಪ್ತಿಯ ಹಳ್ಳಿಗಳು: ಮಳಮಾಚನಹಳ್ಳಿ-1, ಮಳಮಾಚನಹಳ್ಳಿ-2, ತಾದೂರು, ಬಸವಾಪಟ್ಟಣ, ಚಿಕ್ಕದಾಸರಹಳ್ಳಿ, ಮುಗಲಡಪಿ

ಚುನಾವಣಾ ಅಧಿಕಾರಿ: ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೃಷ್ಣಪರಮಾತ್ಮ (Contact: 9480396131)
ಸಹಾಯಕ ಚುನಾವಣಾ ಅಧಿಕಾರಿ: ದೊಡ್ಡತೇಕಹಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಹರೀಶ್ ಬಾಬು (Contact: 8618091598)

ಹೊಸಪೇಟೆ ಗ್ರಾಮ ಪಂಚಾಯಿತಿ:

ವ್ಯಾಪ್ತಿಯ ಹಳ್ಳಿಗಳು: ಹೊಸಪೇಟೆ, ಘಟ್ಟಮಾರನಹಳ್ಳಿ, ಯಣ್ಣಂಗೂರು, ಎದ್ದಲ ತಿಪ್ಪೇನಹಳ್ಳಿ, ಮಲ್ಲೇನಹಳ್ಳಿ, ಕಲ್ಯಾಪುರ, ಹಿರೇಬಲ್ಲ

ಚುನಾವಣಾ ಅಧಿಕಾರಿ: ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ (Contact: 9880831519)
ಸಹಾಯಕ ಚುನಾವಣಾ ಅಧಿಕಾರಿ: ಬಶೆಟ್ಟಿಹಳ್ಳಿ ಪ್ರೌಢಶಾಲೆ ಪ್ರಭಾರ ಮುಖ್ಯಶಿಕ್ಷಕ ಶಂಕರಪ್ಪ ಇ. (Contact: 9741153633)

ನಾಗಮಂಗಲ ಗ್ರಾಮ ಪಂಚಾಯಿತಿ:

ವ್ಯಾಪ್ತಿಯ ಹಳ್ಳಿಗಳು: ನಾಗಮಂಗಲ, ಹೊಸಹಳ್ಳಿ, ನಡಿಪಿನಾಯಕನಹಳ್ಳಿ

ಚುನಾವಣಾ ಅಧಿಕಾರಿ: ಶಿಡ್ಲಘಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಎಚ್.ಸಿ. ಮುನಿರಾಜು (Contact: 9480396131)
ಸಹಾಯಕ ಚುನಾವಣಾ ಅಧಿಕಾರಿ: ಕುಂದಲಗುರ್ಕಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಎಲ್.ವಿ. ವೆಂಕಟರೆಡ್ಡಿ (Contact: 9448360179)

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!