Chintamani : ಚಿಂತಾಮಣಿ ನಗರದ APMC ಮಾರುಕಟ್ಟೆಯಲ್ಲಿ ಮಧ್ಯರಾತ್ರಿ ಖಾಕಿ ಸಮವಸ್ತ್ರದಾರಿ ಹಾಗೂ ಮತ್ತೊಬ್ಬ ವ್ಯಕ್ತಿ Tomato ಕಳವು ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪ್ಲಾಸ್ಟಿಕ್ ಪೇಪರ್ ಹೊದಿಸಿ ಕಟ್ಟಿದ್ದ ರೈತರೊಬ್ಬರ ಟೊಮೆಟೊ ತುಂಬಿದ ಕ್ರೇಟ್ ಗಳಿಂದ ಖಾಕಿ ಸಮವಸ್ತ್ರದಾರಿ ಹಾಗೂ ಮತ್ತೊಬ್ಬ ವ್ಯಕ್ತಿ ಮಧ್ಯರಾತ್ರಿಯಲ್ಲಿ ಹೊದಿಕೆ ತೆಗೆದು ತಾವು ತಂದಿದ್ದ ಕವರ್ ಗೆ ಟೊಮೆಟೊ ತುಂಬಿಸಿಕೊಂಡಿರುವ ದೃಶ್ಯ CCTV ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಚಿಂತಾಮಣಿ ನಗರದ APMC ಮಾರುಕಟ್ಟೆಯಲ್ಲಿ ಬೆಳಿಗ್ಗೆ ನಡೆಯುವ ಹರಾಜಿನಲ್ಲಿ ಭಾಗವಹಿಸಲು ರೈತರು ಹಿಂದಿನ ದಿನ ಸಂಜೆಯೇ ಹಣ್ಣನ್ನು ಕ್ರೇಟ್‌ಗಳಲ್ಲಿ ತಂದು ದಾಸ್ತಾನು ಮಾಡುವುದು ವಾಡಿಕೆಯಾಗಿದ್ದು, ಕೆಲವು ದಿನಗಳಿಂದ ಟೊಮೆಟೊ ಬೆಲೆ ಹೆಚ್ಚಾಗಿರುವುದರಿಂದ ಕಳ್ಳರ ಕಾಟ ಅಧಿಕವಾಗಿದೆ. ಮಾರಾಟಕ್ಕೆ ಟೊಮೆಟೊ ತಂದಾಗ ಕಳವು ನಡೆಯುತ್ತಿದೆ ಎಂದು ರೈತರು ಬಹಳಷ್ಟು ಸಾರಿ ದೂರಿದ್ದರು. ಕಳೆದ ವಾರ ಎಪಿಎಂಸಿ ಮಾರುಕಟ್ಟೆಯಲ್ಲಿ ರಾತ್ರಿ ವೇಳೆಯಲ್ಲಿ ಟೊಮೆಟೊ ಕದಿಯುತ್ತಿದ್ದವರನ್ನು ಮಂಡಿ ಮಾಲೀಕರೇ ಪತ್ತೆ ಮಾಡಿದ್ದರು.