Chintamani : ಚಿಂತಾಮಣಿ ನಗರದ ಹೊರವಲಯದಲ್ಲಿರುವ ಹಜರತ ಸೈಯದ್ ಬಾಬಾ ಬುಡನ್ ಷಾ ವಲಿ ದರ್ಗಾದ (Baba Budan sha vali Dargah) 108ನೇ ಗಂಧೋತ್ಸವ (Gandhotsava) ಬಹಳ ವಿಜೃಂಭಣೆಯಿಂದ ನಡೆಸಲಾಯಿತು. ಹಿಂದೂ-ಮುಸ್ಲಿಂರು ಒಟ್ಟಾಗಿ ಯಾವುದೇ ಗೊಂದಲಗಳಿಲ್ಲದೆ ಗಂಧೋತ್ಸವ ನಡೆಸಿದರು.
ದರ್ಗಾದಲ್ಲಿ ಗಂಧ ಸಮರ್ಪಿಸಿ ದೇಶದ ಜನರ ಒಳಿತಿಗಾಗಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. ಉರುಸ್ ಅಂಗವಾಗಿ ದರ್ಗಾವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು ಮತ್ತು ಗಂಧ ತೆಗೆದುಕೊಂಡು ಹೋಗುವ ಸಂದಲ್ ಮೆರವಣಿಗೆ ಆಕರ್ಷಣೀಯವಾಗಿತ್ತು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.