Chintamani : ಜುಲೈ 6ರಿಂದ 10ರವರೆಗೆ ಚಿಂತಾಮಣಿ ನಗರದ 66/11 ಕೆವಿ ಉಪಕೇಂದ್ರದಿಂದ ಉಳಿಕೆ ಲಿಂಕ್ ಲೈನ್ ಕಾಮಗಾರಿ ಕೈಗೊಳ್ಳುತ್ತಿದ್ದು ಈ ಉಪಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಎಫ್-10 ಪ್ರಭಾಕರ್ ಬಡಾವಣೆ ಫೀಡರ್‌ನ ಅಂಜನಿ ಬಡಾವಣೆ, ಅಶ್ವಿನಿ ಬಡಾವಣೆ, ಫಿಲ್ಟರ್ ಬೆಡ್, ಡೆಕ್ಕನ್ ಆಸ್ಪತ್ರೆ ರಸ್ತೆ, ಬೆಂಗಳೂರು ರಸ್ತೆ, ಅಂಜನಿ ಚಿತ್ರಮಂದಿರ ಪ್ರದೇಶ, ಪ್ರಭಾಕರ್ ಬಡಾವಣೆ, ರಾಜೀವನಗರ ಬಡಾವಣೆ, ವೆಂಕಟಗಿರಿಕೋಟೆ, ಆಶ್ರಯ ಬಡಾವಣೆ, ಕೆಂಪಮ್ಮ ಬಡಾವಣೆ, ಟೀಚರ್ಸ್ ಕಾಲೊನಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಡಿಪೊ ಸುತ್ತಮುತ್ತಲ ಪ್ರದೇಶದಲ್ಲಿ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. (Power Cut)
ಶನಿವಾರ ದಿಂದ ಬುಧವಾರದವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಸಾರ್ವಜನಿಕರು ಮುಂಜಾಗ್ರತಾ ಕ್ರಮಕೈಗೊಂಡು ಕಾಮಗಾರಿಗೆ ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ಜಿ.ಶಿವಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.