Home News Chintamani Bolero ಮತ್ತು Tata Ace ಡಿಕ್ಕಿ: ಓರ್ವ ಸಾವು

Bolero ಮತ್ತು Tata Ace ಡಿಕ್ಕಿ: ಓರ್ವ ಸಾವು

0
316
Chintamani Bolero Tata Ace Acident

Chintamani : ಚಿಂತಾಮಣಿ-ಕೋಲಾರ ರಸ್ತೆಯ ಕುರುಟಹಳ್ಳಿ ಕ್ರಾಸ್ ಬಳಿ ಬುಧವಾರ Bolero ಮತ್ತು Tata Ace ನಡುವೆ ರಸ್ತೆ ಅಪಘಾತ (Accident) ಸಂಭವಿಸಿದ್ದು ಸ್ಥಳದಲ್ಲೇ ಓರ್ವ ವ್ಯಕ್ತಿ ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ.

ಹೊಸಕೋಟೆಯಿಂದ ಬರುತ್ತಿದ್ದ ಟಾಟಾ ಏಸ್ ವಾಹನಕ್ಕೆ ಶ್ರೀನಿವಾಸಪುರದ ಕಡೆಯಿಂದ ಹೂಕೋಸು ತುಂಬಿಕೊಂಡು ಕೂಲಿಯಾಳುಗಳೊಂದಿಗೆ ಟಿ.ಹೊಸಹಳ್ಳಿ ಕಡೆಗೆ ಹೋಗುತ್ತಿದ್ದ ಬೊಲೆರೋ ವಾಹನ ಮುಖಾಮುಖಿ ಢಿಕ್ಕಿಯಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮೃತ ವ್ಯಕ್ತಿಯನ್ನು ತಾಲ್ಲೂಕಿನ ಕೈವಾರ ಹೋಬಳಿಯ ಟಿ.ಹೊಸಹಳ್ಳಿ ಗ್ರಾಮದ ನಾರಾಯಣಸ್ವಾಮಿ (55) ಎಂದು ಗುರುತಿಸಲ್ಪಟ್ಟಿದ್ದು. ಟಾಟಾ ಏಸ್ ಚಾಲಕ ಕೇರಳದ ನಿವಾಸಿ ವಿಷ್ಣು, ಬೊಲೆರೋ ವಾಹನದ ಮಾಲೀಕ ಮಂಜುನಾಥ್, ಚಾಲಕ ಆದರ್ಶ, ವಾಹನದಲ್ಲಿದ್ದ ಅಜಯ್ ಕುಮಾರ್, ಅನಿತಮ್ಮ, ನರಸಮ್ಮ, ಲಕ್ಷ್ಮಮ್ಮ, ಗಾಯಾಳುಗಳಾಗಿದ್ದಾರೆ.

ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!