Chintamani : ಚಿಂತಾಮಣಿ ನಗರಸಭೆಯ ಎರಡನೇ ಅವಧಿಯ ಅಧಿಕಾರದ ಗದ್ದುಗೆಗೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವಾರ್ಡ್ ನಂ 7ರ ಕಾಂಗ್ರೆಸ್ ಪಕ್ಷದ ಆರ್.ಜಗನ್ನಾಥ್ ಹಾಗೂ ಉಪಾಧ್ಯಕ್ಷೆಯಾಗಿ 27ನೇ ವಾರ್ಡ್ ನ ಕೆ.ರಾಣಿಯಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ (CMC President Election).
ವಿರೋಧ ಪಕ್ಷವಾದ ಜೆಡಿಎಸ್ ಸೇರಿದಂತೆ ಇತರೆ ಯಾರು ನಾಮಪತ್ರ ಸಲ್ಲಿಸಲಿಲ್ಲ. ಪರಿಶೀಲನೆಯಲ್ಲಿ ಎರಡು ನಾಮಪತ್ರ ಕ್ರಮಬದ್ಧವಾಗಿದ್ದವು ಎಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಅಶ್ವಿನ್ ತಿಳಿಸಿದರು.
ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸಚಿವ ಡಾ.ಎಂ.ಸಿ.ಸುಧಾಕರ್ ಅಭಿನಂದಿಸಿದರು.