- Advertisement -
- Advertisement -
- Advertisement -
- Advertisement -
Chintamani : ಚಿಂತಾಮಣಿ ತಾಲ್ಲೂಕಿನ ಕೊಡದವಾಡಿ ಕೆರೆಯಲ್ಲಿ ಕುರಿಗಳನ್ನು ತೊಳೆಯಲು ಹೋಗಿ ಮೂವರು ಬಾಲಕರು ಮೃತಪಟ್ಟ ಘಟನೆ ಮಂಗಳವಾರ ನೆಡೆದಿದೆ.
ಕೊಡದವಾಡಿ ಗ್ರಾಮದ ಸೋದನ್ (15), ಸುದರ್ಶನ್(17) ಬಚ್ಚವಾರಹಳ್ಳಿಯ ಸತೀಶ್ (17) ಮೃತರಾದ ಬಾಲಕರು.
ಸುದರ್ಶನ್, ಅರ್ಜುನ್, ಬಚ್ಚವಾರಹಳ್ಳಿ ಸತೀಶ್ ಹಾಗೂ ಗ್ರಾಮದ ಸೋದನ್ ಕೆರೆಯಲ್ಲಿ ಕುರಿಗಳನ್ನು ತೊಳೆಯಲು ಹೋಗಿದ್ದರು. ಅರ್ಜುನ್ ಕೆರೆಯ ದಡದಲ್ಲಿ ಕುಳಿತ್ತಿದ್ದ.
ಸೋದನ್ ಮತ್ತು ಸುದರ್ಶನ್ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ರಕ್ಷಣೆಗೆ ಮುಂದಾದ ಸತೀಶ್ ಸೇರಿ ಮೂವರೂ ನೀರು ಪಾಲಾಗಿದ್ದಾರೆ.
ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur
- Advertisement -