ಇಂಗ್ಲಿಷ್ ಕಲಿಕಾ ಕಾರ್ಯಾಗಾರ

- Advertisement -
- Advertisement -

Chintamani : ಚಿಂತಾಮಣಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಆಂಗ್ಲಭಾಷಾ ವಿಭಾಗ, I.Q.A.C ಸಹಯೋಗದಲ್ಲಿ ಮಂಗಳವಾರ ‘ಇಂಗ್ಲಿಷ್ ಕಲಿಕಾ ಕಾರ್ಯಾಗಾರ’ (English Learning Workshop) ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಂಗ್ಲಭಾಷಾ ತಜ್ಞ ಪ್ರಕೃತಿ ಎನ್.ಬನವಾಸಿ “ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಬುದ್ಧಿವಂತರು ಮತ್ತು ಸಾಮಾನ್ಯ ಜ್ಞಾನ ಹೊಂದಿದ್ದರೂ ಆಂಗ್ಲಭಾಷೆಯಲ್ಲಿ ಮಾತನಾಡುವ ಕೊರತೆಯಿಂದ ಅವಕಾಶ ವಂಚಿತರಾಗುತ್ತಾರೆ ಹಾಗೂ ಆಯ್ಕೆಯಾದರೂ ಕಡಿಮೆ ವೇತನ ಪಡೆಯುವ ಅನಿವಾರ್ಯತೆ ಎದುರಾಗಲಿದೆ. ಕಲಿಯುವ ದೃಢ ನಿರ್ಧಾರ ಹಾಗೂ ಸತತ ಪ್ರಯತ್ನವಿದ್ದರೆ ಭಾಷೆ ಮೇಲೆ ಹಿಡಿತ ಸಾಧಿಸಬಹುದು” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಂಗ್ಲಭಾಷೆ ವಿಭಾಗದ ಮುಖ್ಯಸ್ಥೆ ಪ್ರೊ.ಎಚ್.ಎಸ್.ಕವಿತಾ, ಪ್ರಾಂಶುಪಾಲೆ ಡಾ.ಕೆ.ಶಾರದಾ ಅಧ್ಯಕ್ಷತೆ ವಹಿಸಿದ್ದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಶಿವಶಂಕರಪ್ರಸಾದ್ ಮಾತನಾಡಿದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!