20.4 C
Bengaluru
Sunday, March 1, 2026

ಜೂಜಾಟ ಅಡ್ಡ ಮೇಲೆ ದಾಳಿ : ಮೂವರ ಬಂಧನ

- Advertisement -
- Advertisement -

Chintamani : ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ತಾಲ್ಲೂಕಿನ ಅಗ್ರಹಾರ-ಪಣಸಚೌಡನಹಳ್ಳಿ ನಡುವೆ ಆಂಜನೇಯ ದೇವಾಲಯದ ಬಳಿ ಅಂದರ್-ಬಾಹರ್ ಜೂಜಾಟದಲ್ಲಿ (Gambling Ride) ನಿರತರಾಗಿದ್ದರು ಎಂದು ಆರೋಪಿಸಿ ಮೂವರನ್ನು ಬಂಧಿಸಿದ್ದಾರೆ (Arrest) .

ಕೋನಪ್ಪಲ್ಲಿ ಗ್ರಾಮದ ವೆಂಕಟರೆಡ್ಡಿ, ಪಣಸಚೌಡನಹಳ್ಳಿ ಗ್ರಾಮದ ನಾಗರಾಜ, ವೆಂಕಟೇಶ್ ಬಂಧಿತ ಆರೋಪಿಗಳು ಎನ್ನಾಲಾಗಿದೆ. ಆಲಂಬಗಿರಿ ಹೊಸಹಳ್ಳಿ ಗ್ರಾಮದ ರವಿ, ಪ್ರಕಾಶ್, ಕುರುಬೂರು ಗ್ರಾಮದ ಮಂಜುನಾಥ್, ಸೀಕಲ್ ಗ್ರಾಮದ ಶಿವಣ್ಣ, ಶಿವಪ್ಪ, ಕೂತರಾಜನಹಳ್ಳಿ ಗ್ರಾಮದ ವೆಂಕಟರಮಣ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಬಂಧಿತರಿಂದ ₹6,220 ನಗದು ಹಾಗೂ ಇಸ್ಪೀಟ್ ಎಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಾಲಾಗಿದೆ.

ಸಬ್ ಇನ್‌ಸ್ಪೆಕ್ಟರ್ ಗೋಪಾಲ, ಸಿಬ್ಬಂದಿ ಸಂದೀಪ್, ಸುರೇಶ್, ನರೇಶ್, ವೆಂಕಟರಮಣ ಅವರ ತಂಡ ದಾಳಿ ನಡೆಸಿದ್ದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!