Chintamani : ಚಿಂತಾಮಣಿ ನಗರದ ಬಂಬೂಬಜಾರ್ ಸ್ಮಶಾನ ಬೀದಿಯಲ್ಲಿರುವ ಶೆಡ್ ಮೇಲೆ ಭಾನುವಾರ ಸಂಜೆ ಪೊಲೀಸರು ದಾಳಿ ನಡೆಸಿ ಗ್ಯಾಸ್ ಸಿಲಿಂಡರ್ ಮೂಲಕ ವಾಹನಗಳಿಗೆ ಗ್ಯಾಸ್ ರೀಫಿಲ್ಲಿಂಗ್ (Illegal Gas Refilling) ಮಾಡುತ್ತಿದ್ದ ಮಹ್ಮದ್ ಅತಾವುಲ್ಲಾ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ (Arrest) .
ಈ ಸಂದರ್ಭದಲ್ಲಿ ಪೊಲೀಸರು ಅರ್ಧ ತುಂಬಿದ ಸಿಲಿಂಡರ್, ತೂಕದ ಸ್ಕೇಲ್, ಗ್ಯಾಸ್ ಫಿಲ್ಲಿಂಗ್‌ಗೆ ಬಳಸುವ ಪೈಪ್ ವಶಪಡಿಸಿಕೊಂಡಿದ್ದಾರೆ. ಮಹ್ಮದ್ ಅತಾವುಲ್ಲಾ ಬಳಿ ಯಾವುದೇ ಪರವಾನಗಿ ಇರಲಿಲ್ಲ. ಯಾವುದೇ ಸುರಕ್ಷಿತ ಕ್ರಮ ಕೈಗೊಳ್ಳದೆ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರಠಾಣೆಯ ಸಬ್ ಇನ್‌ಸ್ಪೆಕ್ಟರ್ ನಾರಾಯಣಸ್ವಾಮಿ ನೇತೃತ್ವದಲ್ಲಿ ಚಂದ್ರಶೇಖರ್, ಲೋಕೇಶ್, ಅಂಜನಾರೆಡ್ಡಿ ತಂಡ ದಾಳಿ ನಡೆಸಿದೆ.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur