Chintamani : ಚಿಂತಾಮಣಿ ತಾಲ್ಲೂಕಿನ ಕೈವಾರದ ಯೋಗಿನಾರೇಯಣ ತಫೋವನದಲ್ಲಿ ಅಚಲ ಸಾಂಸ್ಕೃತಿಕ ಬಳಗ ಹಮ್ಮಿಕೊಂಡಿದ್ದ ‘ಗೆಜ್ಜೆ ಮೇಳ’ (Gajje Mela) ಮಕ್ಕಳ ಬೇಸಿಗೆ ಶಿಬಿರಕ್ಕೆ (Summer Camp) ಗಿಡಕ್ಕೆ ನೀರು ಹಾಕುವ ಮೂಲಕ ತೆರೆ (Closing) ಎಳೆಯಲಾಯಿತು.
ಸಮಾರಂಭದಲ್ಲಿ ಮಾತನಾಡಿದ ಬಿಎಂಟಿಸಿ ಮೊಟ್ಟಮೊದಲ ಮಹಿಳಾ ಬಸ್ ಚಾಲಕಿ ಪ್ರೇಮ ರಾಮಪ್ಪ ” ಆಧುನಿಕ ಮತ್ತು ಡಿಜಿಟಲ್ ಯುಗದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಕಠಿಣ ಸ್ಪರ್ದೆ ಇದ್ದು ವಿದ್ಯಾರ್ಥಿಗಳು ಸ್ಪರ್ಧಾಮನೋಭಾವನೆದಿಂದ ಎಲ್ಲ ರಂಗಗಳಲ್ಲೂ ಸಕ್ರಿಯರಾಗಬೇಕು. ಗ್ರಾಮೀಣ ಭಾಗದ ಮಕ್ಕಳು ಕೌಶಲಗಳಿಂದ ವಂಚಿತರಾಗಬಾರದು ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನದೆ ಆದ ಕೌಶಲ ವೃದ್ಧಿಸಿಕೊಳ್ಳಬೇಕು. ಸಾಮಾಜಿಕ ಚಿಂತನೆ, ನಾಯಕತ್ವ, ಪ್ರಾಪಂಚಿಕ ಜ್ಞಾನ ಪಡೆಯಲು ಬೇಸಿಗೆ ಶಿಬಿರಗಳು ಸಹಕಾರಿಯಾಗುತ್ತವೆ” ಎಂದು ತಿಳಿಸಿದರು.
ಹಿರಿಯ ಹೋರಾಟಗಾರ ಎನ್.ವೆಂಕಟೇಶ್, ಜನಪದ ಗಾಯಕ ಮುನಿರೆಡ್ಡಿ, ಶಿಬಿರದ ನಿರ್ದೇಶಕ ಎಂ.ನಾಗೇಶ್, ಅಚಲ ಸಾಂಸ್ಕೃತಿಕ ಬಳಗದ ಸಂಸ್ಥಾಪಕ ಚಿ.ಮು.ಹರೀಶ್, ಉಪನ್ಯಾಸಕ ರವಿ, ಆರ್.ಡಿ.ಮಂಜುನಾಥ್, ಬಿ.ಕೆ.ನಾರಾಯಣಸ್ವಾಮಿ, ಎಸ್.ವಿ.ಚಲಪತಿ, ಮಹೇಶ್ ಕುಮಾರ್, ಎಂ.ಎನ್.ರವಿ, ಡ್ಯಾನ್ಸರ್ ದೇವು, ನರಸಿಂಹಮೂರ್ತಿ, ರೇಣುಕಾ, ರಾಘವೇಂದ್ರ, ಆಂಜನೇಯರೆಡ್ಡಿ, ಗಿರೀಶಬಾಬು, ಎಂ.ಚಿರಂಜೀವಿ, ಕನ್ಯಪ್ಪ, ಗಾಯಕ ಮಹೇಶ್ ಕುಮಾರ್, ಡಿ.ಎಂ.ನಟರಾಜ್, ನರೇಶ್, ಕಾರ್ತೀಕ್ ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366