Home News Chintamani March 25, 26ಕ್ಕೆ ಕೈವಾರ ಅಮರನಾರೇಯಣ ರಥೋತ್ಸವ

March 25, 26ಕ್ಕೆ ಕೈವಾರ ಅಮರನಾರೇಯಣ ರಥೋತ್ಸವ

0
334
Chintamani Kaiwara Rathotsava Press Meet

Chintamani : ಚಿಂತಾಮಣಿ ತಾಲ್ಲೂಕಿನ ಕೈವಾರ (Kaiwara) ಯೋಗಿನಾರೇಯಣ ಮಠದಲ್ಲಿ ಕೈವಾರ ತಾತಯ್ಯ ಜಯಂತಿ ಹಾಗೂ ರಥೋತ್ಸವದ (Rathotsava) ಕುರಿತು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್.ಜಯರಾಮ್ ಸೋಮವಾರ ಸುದ್ದಿಗೋಷ್ಠಿ (Press Meet) ನಡೆಸಿದರು.

ಈ ಸಂದರ್ಭಲ್ಲಿ ಮಾತನಾಡಿದ ಧರ್ಮಾಧಿಕಾರಿ ಎಂ.ಆರ್.ಜಯರಾಮ್ “ಮಾರ್ಚ್ 24 ರಂದು ಭಾನುವಾರ ಗೋಪೂಜೆಯೊಂದಿಗೆ ಕೈವಾರ ತಾತಯ್ಯ ಜಯಂತಿ ಹಾಗೂ ರಥೋತ್ಸವ ಕಾರ್ಯಕ್ರಮ ಪ್ರಾರಂಭವಾಗಳಿದ್ದು ತಾತಯ್ಯನವರಿಗೆ ಮಾರ್ಚ್ 24, 25 ಮತ್ತು 26 ರಂದು ವಿಶೇಷ ಅಭಿಷೇಕ, ಅಷ್ಟಾವಧಾನ ಸೇವೆ, ಮಂಗಳಾರತಿ ಸಮರ್ಪಿಸಲಾಗುತ್ತದೆ. ಈ ಮೂರು ದಿನಗಳು ವಿವಿಧ ಭಜನಾ ಮಂಡಳಿಯಿಂದ ಸಾಮೂಹಿಕ ನಾಮಸಂಕೀರ್ತನೆ, ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್ ಅವರಿಂದ ನಾಮ ಸಂಕೀರ್ತನೆ,ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಮಾರ್ಚ್ 25 ರ ಮಧ್ಯಾಹ್ನ 1 ಗಂಟೆಗೆ ಅಮರನಾರೇಯಣ ರಥೋತ್ಸವ ನೆರವೇರಿಸಲಾಗುವುದು” ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಠದ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ್, ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್ ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!