Home Chintamani ಚಿಂತಾಮಣಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಆಯ್ಕೆ

ಚಿಂತಾಮಣಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಆಯ್ಕೆ

0
496
Chintamani Kannada Sahitya Parishar Taluk President

Chintamani : ಚಿಂತಾಮಣಿ ನಗರದ ಸರ್ಕಾರಿ ನೌಕರರ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಕೋಡಿರಂಗಪ್ಪ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಸದಸ್ಯರ ಒಕ್ಕೂರಲ ಅಭಿಪ್ರಾಯದಂತೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ (Kannada Sahitya Parishat Taluk President) ಶಿಕ್ಷಕ ದೇವತಾ ದೇವರಾಜ್ ರವರನ್ನು ಆಯ್ಕೆ ಮಾಡಲಾಯಿತು.

ಜಿಲ್ಲಾ ಅಧ್ಯಕ್ಷ ಕೋಡಿರಂಗಪ್ಪ ಮಾತನಾಡಿ ಜಿಲ್ಲೆಯಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಬೆಳೆಸಲು ಎಲ್ಲರನ್ನೂ ಒಗ್ಗೂಡಿಸಿ ಕೊಂಡು ಶಕ್ತಿಮೀರಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.ಜಿಲ್ಲೆಯಲ್ಲಿ ಎಲ್ಲರ ಸಹಕಾರದೊಂದಿಗೆ ಕನ್ನಡದ ಕಾರ್ಯಕ್ರಮ ನಿರಂತರವಾಗಿ ಮಾಡುವುದರ ಮೂಲಕ ಕನ್ನಡದ ಕಂಪು ಮತ್ತಷ್ಟು ಪಸರಿಸುವುದಾಗಿ ತಿಳಿಸಿದರು.

ಸಾಹಿತಿ ಗೋಪಾಲಗೌಡ ಕಲ್ವಮಂಜಲಿ, ಮಂಚನಬಲೆ ಶ್ರೀನಿವಾಸ್, ನಿವೃತ್ತ ಪ್ರಾಂಶುಪಾಲರಾದ ಸಿ. ಆಶ್ವಥಮ್ಮ, ಜನಪದ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷೆ ಲೀಲಾಲಕ್ಷ್ಮೀನಾರಾಯಣ್, ಕರವೇ ಕುಂಟಿಗಡ್ಡೆ ಲಕ್ಷ್ಮಣ್, ಕಸಾಪ ಮಾಜಿ ಅಧ್ಯಕ್ಷ ಮುನಿಕೃಷ್ಣಪ್ಪ, ಸಿಆರ್.ಪಿ ಸುಬ್ರಮಣಿ, ಕಸಪಾ ಸದಸ್ಯರು, ಸಾಹಿತ್ಯಾಭಿ ಮಾನಿಗಳು, ಕವಿಗಳು, ಚಿಂತಕರು ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!