Chintamani : ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ (Amrutha Mahotsava) ದ ಅಂಗವಾಗಿ ಭಾನುವಾರ ಚಿಂತಾಮಣಿ ನಗರದ ವಿದ್ಯಾಗಣಪತಿ ರಂಗಮಂದಿರದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (Karnataka Border Area Development Authority) ಹಾಗೂ ಬೆಂಗಳೂರಿನ ಸಂಗೀತಧಾಮ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ವತಿಯಿಂದ ‘ಗಡಿನಾಡಿನಲ್ಲಿ ಕನ್ನಡ ಸಂಸ್ಕೃತಿ ಸಂಭ್ರಮ’ (Gadinadinalli Kannada Samskruti Sambhrama) ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕವಿ ಬಿ.ಆರ್.ಲಕ್ಷ್ಮಣರಾವ್ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ “2010ರಲ್ಲಿ ಸ್ಥಾಪನೆಯಾದ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯಲ್ಲಿ ಗೌರಿಬಿದನೂರು (Gauribidanur), ಗುಡಿಬಂಡೆ (Gudibande), ಬಾಗೇಪಲ್ಲಿ (Bagepalli), ಚಿಂತಾಮಣಿ ತಾಲ್ಲೂಕುಗಳು ಬರಲಿದ್ದು ಗಡಿಭಾಗಗಳಲ್ಲಿ ಕನ್ನಡ (Kannada) ದ ಅಸ್ಮಿತೆಯನ್ನು ಜಾಗೃತಗೊಳಿಸಿ ಭಾಷೆಯ ಪ್ರಜ್ಞೆಯನ್ನು ರಕ್ಷಣೆ ಮಾಡುವುದು, ಶಾಲೆ ಹಾಗೂ ಮೂಲಸೌಲಭ್ಯಗಳನ್ನು ಒದಗಿಸುವುದು ಪ್ರಾಧಿಕಾರದ ಧ್ಯೇಯವಾಗಿದೆ” ಎಂದು ಹೇಳಿದರು.
ಶಾಸಕ ಎಂ.ಕೃಷ್ಣಾರೆಡ್ಡಿ (M Krishna Reddy), ತಹಶೀಲ್ದಾರ್ ಮುನಿಶಾಮಿರೆಡ್ಡಿ, ಲಕ್ಷ್ಮಿವಿದ್ಯಾ ಸಂಸ್ಥೆಗಳ ಅಧ್ಯಕ್ಷ ಸಿ.ಎನ್.ನರಸಿಂಹರೆಡ್ಡಿ, ಗೆಳೆಯರ ಬಳಗದ ಎ.ಸತ್ಯಪ್ರಸಾದ್, ಸಂಗೀತಧಾಮದ ಮೃತ್ಯುಂಜಯ ದೊಡ್ಡವಾಡ, ಕಲಾದೇಗುಲ ಶ್ರೀನಿವಾಸ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೋಡಿರಂಗಪ್ಪ, ನಗರಸಭೆ ಅಧ್ಯಕ್ಷೆ ರೇಖಾ ಉಮೇಶ್, ತಾಲ್ಲೂಕು ಘಟಕದ ಅಧ್ಯಕ್ಷ ದೇವತಾ ದೇವರಾಜ್, ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷೆ ಲೀಲಾ ಲಕ್ಷ್ಮಿನಾರಾಯಣ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.