Sunday, June 11, 2023
HomeChintamaniಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ

ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ

- Advertisement -
- Advertisement -
- Advertisement -
- Advertisement -

Chintamani : ಕೊಳಚೆ ನಿರ್ಮೂಲನಾ ಮಂಡಳಿ (Karnataka Slum Development Board) (KSDB) ವತಿಯಿಂದ ಚಿಂತಾಮಣಿ ನಗರದ ಅಂಬೇಡ್ಕರ್ ಕಾಲೊನಿಯ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.

ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಶಾಸಕ ಎಂ.ಕೃಷ್ಣಾರೆಡ್ಡಿ (M Krishnareddy)” ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಮಾಡುವ ಸಮಸ್ಯೆಗೆ ಸ್ವಾತಂತ್ರ್ಯ ಅಮೃತಮಹೋತ್ಸವ ವರ್ಷದಲ್ಲಿ ಸರ್ಕಾರ ಪರಿಹಾರ ನೀಡಿದೆ. ವಸತಿ ಸಚಿವ ಸೋಮಣ್ಣ (V. Somanna) ಚಿಂತಾಮಣಿ ನಗರದ ಜನತೆಗೆ 400 ಹಾಗೂ ತಾಲ್ಲೂಕಿನ ಗ್ರಾಮೀಣ ಭಾಗಗಳಿಗೆ 2 ಸಾವಿರ ಮನೆಗಳನ್ನು ಮಂಜೂರು ಮಾಡಿದ್ದು ಹಂತ ಹಂತವಾಗಿ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ.” ಎಂದು ಹೇಳಿದರು.

ನಗರದಲ್ಲಿ 18 ಕೊಳಚೆ ಪ್ರದೇಶಗಳಿದ್ದು ಜೆ.ಜೆ.ಕಾಲೋನಿಯಲ್ಲಿ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡಿದ ನಂತರ ಅಂಬೇಡ್ಕರ್ ಕಾಲೋನಿಯಲ್ಲಿ ವಿತರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಿನೋಭಾ ಕಾಲೋನಿ, ಶ್ರೀರಾಮನಗರ, ತಿಮ್ಮಸಂದ್ರ ವಾರ್ಡ್‌ಗಳ ಫಲಾನುಭವಿಗಳಿಗೂ ಕೂಡ ಹಕ್ಕುಪತ್ರ ವಿತರಣೆ ಮಾಡಲಾಗುವುದು. ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಹಕ್ಕುಪತ್ರಗಳನ್ನು ಪಡೆದ ಕೂಡಲೇ ನೋಂದಣಿ ಮಾಡಿಸಿ ನಂತರ ನಗರಸಭೆಯಲ್ಲಿ ಖಾತೆ ಮಾಡಿಸಿಕೊಳ್ಳಬೇಕು ಎಂದು ಶಾಸಕರು ಸೂಚಿಸಿದರು.

ಕೊಳಚೆ ನಿರ್ಮೂಲನಾ ಮಂಡಳಿಯ ಎಇಇ ಲೋಕೇಶ್, ನಗರಸಭಾ ಸದಸ್ಯ ಮಂಜುಳಮಧು, ದೇವಳಂಶಂಕರ್, ಇಶ್ರತ್ ಉನ್ನಿಸಾ, ಜಯಮ್ಮ, ಡಾ.ವಿ ಅಮರ್, ಮುಖಂಡ ಶೇಖ್‌ಸಾಧಿಕ್ ರಜ್ವಿ, ಬ್ಲಡ್ ಮಂಜು, ವಿಜಯ್ ಬುಜ್ಜಿ, ಜಿಬಿ ಮೋಹನ್, ಟಿಕ್ಕುನಾರಾಯಣಸ್ವಾಮಿ, ರಾಜ, ಮಂಜು, ಅನಂದ್, ಅಮ್ಜದ್, ಆಜೀಬ್ ಸಾಬ್‌, ಅಮೀರ್ ಜಾನ್, ಬೀಡಿಬಾಬು, ಕೊತ್ತೂರುಬಾಬು, ಅಪ್ಸರ್, ಚಿಟ್ಟಮ್ಮ, ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು.

0.00 avg. rating (0% score) - 0 votes
- Advertisement -
RELATED ARTICLES

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!