Tuesday, April 16, 2024
HomeChintamaniMES ಸಂಘಟನೆಯನ್ನು ನಿಷೇಧಿಸಲು ಕೋರಿ ಪ್ರತಿಭಟನೆ

MES ಸಂಘಟನೆಯನ್ನು ನಿಷೇಧಿಸಲು ಕೋರಿ ಪ್ರತಿಭಟನೆ

- Advertisement -
- Advertisement -
- Advertisement -
- Advertisement -

Chintamani : ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜವನ್ನು ಸುಟ್ಟು ಹಾಗೂ ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಭೆಯನ್ನು ವಿರೂಪಗೊಳಿಸಿದ MES ಸಂಘಟನೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ (Karnataka Rakshana Vedike) ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶುಕ್ರವಾರ ಚಿಂತಾಮಣಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಬೆಂಗಳೂರು ವೃತ್ತದಲ್ಲಿ ಎಂಇಎಸ್ ಧ್ವಜವನ್ನು ದಹನ ಮಾಡಿ, ನಂತರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಹನುಮಂತರಾಯಪ್ಪ ರವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ (ಕನ್ನಡಿಗರ ಸಾರಥ್ಯದಲ್ಲಿ) ಜಿಲ್ಲಾ ಘಟಕದ ಅಧ್ಯಕ್ಷ ಎನ್.ಅಂಬರೀಶ್ ಮಾತನಾಡಿ, ಎಂಇಎಸ್ ಸದಾ ಪುಂಡಾಟ ನಡೆಸುತ್ತಾ ಶಾಂತಿ ಕದಡುತ್ತಿದೆ. ಕನ್ನಡದ ಧ್ವಜವನ್ನು ಸುಡುವುದು, ಕನ್ನಡಿಗರ ಮೂರ್ತಿಗಳನ್ನು ವಿರೂಪಗೊಳಿಸುವುದು, ಹೀಗೆ ಹಲವಾರು ರೀತಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಸರ್ಕಾರ ಬೆಳಗಾವಿ ಜಿಲ್ಲೆಯಲ್ಲಿ ಎಂಇಎಸ್ ಮತಗಳ ಮೇಲೆ ಕಣ್ಣಿಟ್ಟು ಕಾಟಾಚಾರಕ್ಕೆ ಮೊಕದ್ದಮೆ ದಾಖಲಿಸಿ ನಂತರ ಸುಮ್ಮನಾಗುವುದು ಮಾಮೂಲಿಯಾಗಿದೆ. ಸರ್ಕಾರ ಕೂಡಲೇ ಪುಂಡಾಟಿಕೆ ನಡೆಸಿರುವವರ ವಿರುದ್ಧ ಕಠಿಣಕ್ರಮ ಕೈಗೊಂಡು ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು. ಇಲ್ಲದಿದ್ದರೆ ಕನ್ನಡಿಗರೇ ಕಾನೂನನ್ನು ಕೈಗೆ ತೆಗೆದುಕೊಳ್ಳಬೇಕಾಗುತ್ತದೆ ಮುಂದೆ ಆಗುವ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಆಗ್ರಹಿಸಿದರು.

ವೇದಿಕೆಯ ರಾಜ್ಯ ಉಪಾಧ್ಯಕ್ಷ ಆರ್.ಶ್ರೀನಿವಾಸ್, ಸಹ ಕಾರ್ಯದರ್ಶಿ ಆರ್.ನಾಗರಾಜ್, ಜಿಲ್ಲಾ ಖಜಾಂಚಿ ಲಕ್ಷ್ಮಣ್, ತಾಲ್ಲೂಕು ಕಾರ್ಯದರ್ಶಿ ಎ.ಮಂಜುನಾಥ್, ವಿಶ್ವ ಮಾನವ ಸಾಂಸ್ಕೃತಿಕ ಪ್ರತಿಷ್ಟಾನದ ಜಿಲ್ಲಾಧ್ಯಕ್ಷ ಡಾ.ಕೈವಾರ ಶ್ರೀನಿವಾಸ್, ಕಸಾಪ ಮಾಜಿ ಅಧ್ಯಕ್ಷ ಮು.ಪಾಪಣ್ಣ, ಕರವೇ ಮುಖಂಡ ರಮಣ, ಕೆ.ಸುಧಾಕರ್, ಹರೀಶ್, ಮಾದೇಶ್, ಅಂಬರೀಷ್, ಸಿ.ಡಿ.ಶಂಕರ್, ಕೃಷ್ಣಪ್ಪ, ಚಂದ್ರಬಾಬು, ರವಿ, ವೆಂಕಟೇಶ್, ಮಂಜು, ವೆಂಕಟನಾರಾಯಣ, ಗೋವಿಂದ, ಗಂಗಾಧರ ಪ್ರತಿಭಟಣೆಯಲ್ಲಿ ಭಾಗವಹಿಸಿದರು.

For Daily Updates WhatsApp ‘HI’ to 7406303366

- Advertisement -
RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!