Chintamani : ಚಿಂತಾಮಣಿ ತಾಲ್ಲೂಕಿನ ಮುರಗಮಲೆ ಗ್ರಾಮದ ಜಂಗ್ಲಿ ಪೀರ್ ದರ್ಗಾದಲ್ಲಿ ದೇವನಹಳ್ಳಿ ಆಕಾಶ್ ಆಸ್ಪತ್ರೆಯ (Akash Hospital, Devanahalli) ಸಹಕಾರದಿಂದ ಭಾನುವಾರ ಹೋಬಳಿ ಮಟ್ಟದ ಉಚಿತ ಆರೋಗ್ಯ ತಪಾಸಣೆ ಶಿಬಿರ (Health Camp) ಹಮ್ಮಿಕೊಳ್ಳಾಲಾಗಿತು.
ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ KMK Trust ಅಧ್ಯಕ್ಷ ಜಿ.ಎನ್. ವೇಣುಗೋಪಾಲ್ “ಚಿಂತಾಮಣಿ ಕ್ಷೇತ್ರದ ಬಡಜನರಿಗೆ ಆರೋಗ್ಯ ಭಾಗ್ಯ ದೊರೆಯಬೇಕು ಎಂಬ ಉದ್ದೇಶದಿಂದ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಶಿಬಿರದಲ್ಲಿ ಪಾಲ್ಗೊಂಡ ಜನಕ್ಕೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದಲ್ಲಿ ಆಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುವುದು” ಎಂದು ಹೇಳಿದರು.
ಮುಖಂಡರಾದ ಚಂದ್ರಶೇಖರ ರೆಡ್ಡಿ, ಚಿಕ್ಕಕರಕಮಾಕಲಹಳ್ಳಿ ದೇವರಾಜ್, ತಾ.ಪಂ ಮಾಜಿ ಸದಸ್ಯ ರಾಜಣ್ಣ, ಕದಿರಪ್ಪಕೋಟೆ ಶ್ರೀರಾಮ ರೆಡ್ಡಿ, ಅಂಕಣ್ಣ, ಗುಡಿಮಾರ್ಲಹಳ್ಳಿ ಕೃಷ್ಣಾರೆಡ್ಡಿ, ಮುರಗಮಲೆ ಅಲೀಮ್, ಯಗವಕೋಟೆ ಸುಮಂತ್ ಮತ್ತು ಆನಂದರೆಡ್ಡಿ, ಗೋಪಾಲಕೃಷ್ಣ, ವೆಂಕಟೇಶ್, ಆಕಾಶ್ ಆಸ್ಪತ್ರೆಯ ವೈದ್ಯರು ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur