Chintamani : ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಹೋಬಳಿಯ ನಿಮ್ಮಕಾಯಲಹಳ್ಳಿ (Nimmakayalahalli) ಗ್ರಾಮದ ಹಜರತ್ ಸೈಯದ್ ಜಲಲ್ ಖಾಕಿ ಷಾ ಮೌಲಾಬಾಬಾ ದರ್ಗಾದಲ್ಲಿ ಎರಡು ದಿನ ನಡೆದ ಗಂಧೋತ್ಸವಕ್ಕೆ (Gandhostava) ಸೋಮವಾರ ರಾತ್ರಿ ತೆರೆಬಿದ್ದಿತು.
ನಂದಿಗಾನಹಳ್ಳಿ ಸಮೀಪದ ಮೌಲಾಬಾಗ್‌ನಿಂದ ಸೋಮವಾರ ರಾತ್ರಿ ಹೊರಟ ಗಂಧೋತ್ಸವದ ಮೆರವಣಿಗೆ ತಡರಾತ್ರಿಯಲ್ಲಿ ದರ್ಗಾಗೆ ತಲುಪಿತು. ದುರ್ಗಾವನ್ನು ವಿಶೇಷವಾಗಿ ಹೂ ಹಾಗೂ ದೀಪಾಲಂಕಾರ ಮಾಡಲಾಗಿತ್ತು. ಹರಕೆ ಹೊತ್ತಿದ್ದ ಭಕ್ತರು ದರ್ಗಾಗೆ ಗಂಧ ಸಮರ್ಪಿಸಿ ಛಾದರ್ ಹೊದಿಸಿ ಹರಕೆ ತೀರಿಸಿದರು. ಗಂಧೋತ್ಸವದ ಮೆರವಣಿಗೆಗೆ ತಮಟೆ ವಾದನ ಮತ್ತಿತರ ಸಾಂಸ್ಕೃತಿಕ ತಂಡಗಳು ಸಾಥ್ ನೀಡಿದವು. ಮೆರವಣಿಗೆ ಸಾಗಿದ ರಸ್ತೆಗಳಲ್ಲಿ ಮಳೆಯನ್ನು ಲೆಕ್ಕಿಸದೆ ಸಾವಿರಾರು ಮಂದಿ ಮೆರವಣಿಗೆ ವೀಕ್ಷಿಸಿದ ನಂತರ ದರ್ಗಾಗೆ ಗಂಧವನ್ನು ಅರ್ಪಿಸಿ, ಪ್ರಸಾದ ವಿತರಿಸಿದರು.
ರಾತ್ರಿ ಕವ್ವಾಲ ರೈಸ್ ಅನಿಸ್ ಸಾಬ್ರಿ ತಂಡದಿಂದ ಕವ್ವಾಲಿ ಕಾರ್ಯಕ್ರಮ ನಡೆಯಿತು. ಅಮೀರ್ ಜಾನ್, ದಾದಾಪೀರ್, ಕಾರ್ತಿಕ್, ಅಸ್ಲಂ, ಮಹಬೂಬ್, ಎಸ್.ಮೌಲಾ ಅಲಿ, ಪ್ಯಾರೇಜಾನ್, ಮಹಬೂಬ್ ಸಾಬ್, ತಬರೇಜ್, ಶಫೀವುಲ್ಲಾ, ಸಮೀವುಲ್ಲಾ, ರಫೀಕ್, ಜಿಯಾವುಲ್ಲಾ, ತಾಜ್, ಜಬೀ, ಮಹ್ಮದ್, ಇಮ್ತಿಯಾಜ್, ರಿಯಾಜ್, ಶಬ್ಬೀರ್, ಜಬೀರ್, ವಲಿಜಾನ್, ಸದ್ದಾಂ ಮತ್ತಿತರರು ಭಾಗವಹಿಸಿದ್ದರು.