ಭೀಕರ ಅಪಘಾತ: ಸ್ಥಳದಲ್ಲೇ ದಂಪತಿ ಸಾವು, 3 ಮಕ್ಕಳಿಗೆ ಗಾಯ

- Advertisement -
- Advertisement -

Chintamani : ಚಿಂತಾಮಣಿ-ಕೋಲಾರ ರಸ್ತೆಯ ಕಾಚಹಳ್ಳಿ ಗೇಟ್ ಬಳಿ ಭಾನುವಾರ ಟೊಮೆಟೊ ಸಾಗಿಸುತ್ತಿದ್ದ ಟ್ರಕ್ ಎರಡು ದ್ವಿಚಕ್ರವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿಗಳು ಸಾವನ್ನಪ್ಪಿದ್ದು (Road Accident) (Death), ಅವರ ಮೂವರು ಮಕ್ಕಳಿಗೆ ತೀವ್ರ ಗಾಯಗಳಾಗಿವೆ (Injured).

ಮೃತರನ್ನು ಚಿಂತಾಮಣಿ ನಿವಾಸಿಗಳಾದ ಶ್ರೀರಾಮ್ (40) ಮತ್ತು ಶ್ಯಾಮಲಾ (35) ಎಂದು ಗುರುತಿಸಲಾಗಿದೆ. ದಂಪತಿಯ ಮಕ್ಕಳಾದ ಮೋಕ್ಷ (14), ತುಷಾರ (9), ಅವರ ಅಣ್ಣನ ಮಗ ತೇಜು (10) ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಎಸ್‌ಎನ್‌ಆರ್ ಆಸ್ಪತ್ರೆಗೆ ರವಾನಿಸಲಾಗಿದೆ.

ಕೋಲಾರದ ಕುರುಬೂರಿನಿಂದ ಚಿಂತಾಮಣಿಗೆ ಶ್ಯಾಮಲಾ ಅವರು ತಮ್ಮ ಸ್ಕೂಟಿಯಲ್ಲಿ ಮೂವರು ಮಕ್ಕಳು ಹಾಗೂ ಅವರ ಪತಿ ಶ್ರೀರಾಮ್ ಮತ್ತೊಂದು ದ್ವಿಚಕ್ರ ವಾಹನದಲ್ಲಿ ಶ್ಯಾಮಲಾ ಅವರ ಸ್ಕೂಟಿಯನ್ನೇ ಹಿಂಬಾಲಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ಚಾಲಕನ ಅಜಾಗರೂಕತೆ ಮತ್ತು ಅತಿ ವೇಗವಾಗಿ ಚಿಂತಾಮಣಿಯಿಂದ ಬ್ರಾಹ್ಮಣರ ದಿನ್ನೆ ಗ್ರಾಮಕ್ಕೆ ಹೋಗುತ್ತಿದ್ದ ಟೆಂಪೊ ಈ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ 11 ಕೆ.ವಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ, ಕಂಬ ಮುರಿದುಬಿದ್ದಿತ್ತು. ಇದರಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ಶ್ಯಾಮಲಾ ಮತ್ತು ಅವರ ಪತಿ ಶ್ರೀರಾಮ್ ಸ್ಥಳದಲ್ಲೇ ಅಸುನೀಗಿದರು. ಈ ಘಟನೆಯಾದಾಗ ಟೆಂಪೊವನ್ನು ಕ್ಲೀನರ್ ಚಾಲನೆ ಮಾಡುತ್ತಿದ್ದು, ಈ ಅಪಘಾತವಾದ ಕೂಡಲೇ, ಆತ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಎಸ್‌ಪಿ ಡಿ.ಎಲ್. ನಾಗೇಶ್, ಎಎಸ್‌ಪಿ ಕುಶಾಲ್ ಚೌಕ್ಸೆ ಮತ್ತು ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!