Home News Chintamani ಸಂತೇಕಲ್ಲಹಳ್ಳಿ ಗ್ರಾ.ಪಂ: JDS ಬೆಂಬಲಿತ ಅಭ್ಯರ್ಥಿ ಅವಿರೋಧ ಆಯ್ಕೆ

ಸಂತೇಕಲ್ಲಹಳ್ಳಿ ಗ್ರಾ.ಪಂ: JDS ಬೆಂಬಲಿತ ಅಭ್ಯರ್ಥಿ ಅವಿರೋಧ ಆಯ್ಕೆ

0
828
Chintamani Taluk Santhekallahalli Grama Panchayat Election

Chintamani : ಬುಧವಾರ ನಡೆದ ಚಿಂತಾಮಣಿ ತಾಲ್ಲೂಕಿನ ಸಂತೇಕಲ್ಲಹಳ್ಳಿ ಗ್ರಾಮ ಪಂಚಾಯಿತಿ (Santhekallahalli Grama Panchayat Election) ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ JDS ಬೆಂಬಲಿಗರಾದ ಕೆ.ಎನ್.ಮೂರ್ತಿ ಹಾಗೂ ಉಪಾಧ್ಯಕ್ಷರಾಗಿ ಗಾಯಿತ್ರಿ ಮಂಜುನಾಥ್ ಆವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿದ್ದ ಶಶಿಕಲಾ ಚೌಡರೆಡ್ಡಿ ಮತ್ತು ಯಶೋಧಮ್ಮ ಆಂತರಿಕ ಒಪ್ಪಂದದಂತೆ ರಾಜೀನಾಮೆ ನೀಡಿದ್ದರಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಪುನಃ ಚುನಾವಣೆ ನಡೆಯಿತು. ಅಧ್ಯಕ್ಷ ಕೆ.ಎನ್.ಮೂರ್ತಿ ಸುದ್ಧಿಗರಾರರೊಂದಿಗೆ ಮಾತನಾಡಿ ಪಕ್ಷಾತೀತವಾಗಿ ಆಡಳಿತ ನಡೆಸಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್‌. ನಾರಾಯಣಸ್ವಾಮಿ, ಬೈರಪ್ಪ, ಮಹೇಶ್, ಪ್ರಭಾಕರ್, ರಮೇಶ್, ಅತ್ತಾವುಲ್ಲಾ, ಲಕ್ಷಣ, ವಿ.ಎಸ್.ವೆಂಕಟರೆಡ್ಡಿ, ವಿ.ಮುನಿಯಪ್ಪ, ಹೈದರಾಲಿ ಮತ್ತಿತ್ತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!