Chintamani : ನಗರದ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ 144ನೇ ಸೆಕ್ಷನ್‌ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದರ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಬಂದ್‌ಗೆ ಅವಕಾಶವಿಲ್ಲ ಎಂದು ಜಿಲ್ಲಾ ಹೆಚ್ಚುವರಿ ಎಸ್‌ಪಿ ಜಗನ್ನಾಥ ರೈ ಹೇಳಿದ್ದಾರೆ.
ಬುಧವಾರ ಸಂಜೆ ನಗರದ ಪ್ರಮುಖ ರಸ್ತೆಗಳಲ್ಲೋಳಗಡೆ ಪೊಲೀಸ್ ಇಲಾಖೆ ಪಥಸಂಚಲನ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ತಾಲ್ಲೂಕು ದಂಡಾಧಿಕಾರಿಗಳ ನಿರ್ದೇಶನದಂತೆ ನಾಲ್ಕು ಮಂದಿ ಅಥವಾ ಅದಕ್ಕಿಂತ ಹೆಚ್ಚು ಜನರು unlawful assembly ರೂಪಿಸುವುದು, ಮೆರವಣಿಗೆ, ಧರಣಿ, ಬಂದ್‌ಗಳನ್ನು ನಡೆಸುವುದು ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಎಚ್ಚರಿಸಿದರು.
ಬಂದ್‌ಗಾಗಿ ಕೆಲವರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ, ಕಾನೂನುಬದ್ಧವಾಗಿ ಬಂದ್‌ಗೆ ಅವಕಾಶವಿಲ್ಲ ಎಂಬ ಕಾರಣದಿಂದ ಅನುಮತಿ ನಿರಾಕರಿಸಲಾಗಿದೆ. “ತಮಗೆ ಅಹವಾಲುಗಳಿದ್ದರೆ, ಕಾನೂನುಬದ್ಧ ರೀತಿಯಲ್ಲಿ ಪ್ರತಿಬಟಿಸುವ ಅವಕಾಶ ಎಲ್ಲರಿಗೂ ಇದೆ,” ಎಂದು ಅವರು ಹೇಳಿದರು.
ಪಥಸಂಚಲನ ನಡೆಸಿದ ಪೊಲೀಸರು:
ನಗರದಲ್ಲಿ ಕೆಲವು ಸಂಘಟನೆಗಳು ನಾಳೆ (ಗುರುವಾರ) ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ, ಶಿಸ್ತಿನ ವಾತಾವರಣ ನಿರ್ಮಿಸಲು 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಪಥಸಂಚಲನ ನಡೆಸಿದರು. ಬೆಂಗಳೂರು ವೃತ್ತದಿಂದ ಆರಂಭಗೊಂಡ ಪಥಸಂಚಲನ, ಮಾರುತಿ ವೃತ್ತ, ಗಜಾನನ ವೃತ್ತ, ಎಂ.ಜಿ. ರಸ್ತೆ, ಪಿಸಿಆರ್ ಕಾಂಪ್ಲೆಕ್ಸ್, ಚೇಳೂರು ವೃತ್ತ, ಕೋಲಾರ ರಸ್ತೆಯ ಮೂಲಕ ಸಾಗಿತು.
ಈ ವೇಳೆ ಡಿವೈಎಸ್‌ಪಿ ಮುರಳೀಧರ್, ನಗರ ಠಾಣೆ ಇನ್‌ಸ್ಪೆಕ್ಟರ್ ವಿಜಿ ಕುಮಾರ್, ಶಿಡ್ಲಘಟ್ಟ ಇನ್‌ಸ್ಪೆಕ್ಟರ್ ಶ್ರೀನಿವಾಸ್ ಹಾಗೂ ಅನೇಕ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.