Chintamani : ಬೆಂಗಳೂರು-ಮದನಪಲ್ಲಿ ರಾಜ್ಯ ಹೆದ್ದಾರಿ ದಂಡುಪಾಳ್ಯ ಗೇಟ್ ಬಳಿ ಬುಧವಾರ ರಾತ್ರಿ ಟೊಂಪೊ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಆಂಧ್ರಪ್ರದೇಶ ನೆಲ್ಲೂರಿನ ನಿವಾಸಿಗಳಾದ ಶ್ರೀಕಾಂತ್ (35), ಶ್ರೀನಿವಾಸಲು (50), ಪುಷ್ಪ (45) (Tempo Car Accident) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಆಂಧ್ರಪ್ರದೇಶಕ್ಕೆ ಸೇರಿದ ಕಾರು ಬೆಂಗಳೂರಿನಿಂದ ಆಂಧ್ರಪ್ರದೇಶದ ನೆಲ್ಲೂರಿಗೆ ಹೋಗುತ್ತಿತ್ತು. ಬೆಂಗಳೂರಿಗೆ ಸೇರಿದ ಟೆಂಪೊ ಬೆಳಗ್ಗೆ ಆಂಧ್ರಪ್ರದೇಶದ ಬಾಯಿಕೊಂಡ ಗಂಗಮ್ಮ ದೇಗುಲಕ್ಕೆ ಹೋಗಿ ವಾಪಸ್ ಬರುತ್ತಿತ್ತು. ದಂಡುಪಾಳ್ಯ ಗೇಟ್ ಬಳಿ ಎರಡು ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ ಎಂದು ಹೇಳಲಾಗಿದೆ. ಟೆಂಪೊದಲ್ಲಿದ್ದ ಬೆಂಗಳೂರಿನ ನಿವಾಸಿಗಳಾದ ನಾಗೇಂದ್ರ, ಕಿಶೋರ್ ಕುಮಾರ್, ಗುರುಸ್ವಾಮಿ, ಬಿಂದು, ಆದ್ಯ, ಮನುತೇಜ್, ರವಿಕುಮಾರ್, ರಮ್ಯ, ಹಿಮಶ್ರೀ, ಗುರುಸ್ವಾಮಿ, ಜಗದೀಶ್ವರಿ, ಸೋಮೇಶ್ವರರಾವ್ ಗಾಯಗೊಂಡಿದ್ದು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ.
ಎಸ್ಪಿ ಕುಶಾಲ್ ಚೌಕ್ಸೆ, ಹೆಚ್ಚುವರಿ ಎಸ್ಪಿ ಖಾಸಿಂ ರಜಾಕ್, ಡಿವೈಎಸ್ಪಿ ಮುರಳೀಧರ್, ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಶಿವರಾಜ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.