Friday, March 24, 2023
HomeChikkaballapurChikkaballapur ನಗರಸಭೆ ಆವರಣದಲ್ಲಿ Congress ಸದಸ್ಯರ ಪ್ರತಿಭಟನೆ

Chikkaballapur ನಗರಸಭೆ ಆವರಣದಲ್ಲಿ Congress ಸದಸ್ಯರ ಪ್ರತಿಭಟನೆ

- Advertisement -
- Advertisement -
- Advertisement -
- Advertisement -

Chikkaballapur : ಚಿಕ್ಕಬಳ್ಳಾಪುರ ನಗರಸಭೆ ಕಾಂಗ್ರೆಸ್ ಸದಸ್ಯರು (CMC Congress Members) ಗುರುವಾರ ನಗರಸಭೆ ಆವರಣದಲ್ಲಿ ನಗರಸಭೆಯಲ್ಲಿ ಯಾವುದೇ ರೀತಿಯ ಖಾತೆಗಳನ್ನು ಮಾಡಿಕೊಡುತ್ತಿಲ್ಲ, ವಾರ್ಡ್‌ಗಳ ಅಭಿವೃದ್ಧಿ ವಿಚಾರದಲ್ಲಿಯೂ ಸ್ಪಂದಿಸದೆ ಅಧಿಕಾರಿಗಳು ತಾರತಮ್ಯ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ (Protest) ನಡೆಸಿದರು.

ನಗರಸಭೆ (CMC) ಯಲ್ಲಿ ಮಧ್ಯವರ್ತಿಗಳು (Middlemen) ಮತ್ತು ಅಕ್ರಮ ಖಾತೆಗಳ ಹಾವಳಿ ಹೆಚ್ಚಿದ್ದು ಪಕ್ಷಪಾತ ಧೋರಣೆ ಅನುಸರಿಸಿ ಇ- ಖಾತೆ (e-Katha) ಗಳಿಗೆ ಅಲೆದಾಡಿಸಲಾಗುತ್ತಿದೆ. ಮನೆ ನಿರ್ಮಾಣಕ್ಕೆ ನಕ್ಷೆ (House Map) ಅನುಮೋದನೆ ದೊರೆಯುತ್ತಿಲ್ಲ. ಅವಧಿ ಮೀರಿರುವ ನಗರಸಭೆಯ ಮಳಿಗೆಗಳಿಗೆ ಮರು ಟೆಂಡರ್ (Tender) ಮಾಡಿಲ್ಲ. ಮಳೆಬಂದರೆ UGD, ಚರಂಡಿಗಳು ತುಂಬಿ ಹರಿಯುತ್ತವೆ. ವಾರ್ಡ್‌ಗಳಲ್ಲಿ ಹಲವು ಸಮಸ್ಯೆಗಳು ಇದ್ದರು ಆಯುಕ್ತರು ಸೇರಿದಂತೆ ಅಧಿಕಾರಿಗಳು ವಾರ್ಡ್‌ಗಳಿಗೆ ಭೇಟಿ ನೀಡುವುದೇ ಇಲ್ಲ ಎಂದು ಪ್ರತಿಭಟನಕಾರರು ದೂರಿದರು.

ಜನರಿಗೆ ಅನುಕೂಲ ಆಗಬೇಕು ಎನ್ನುವುದು ನಮ್ಮ ಒತ್ತಾಯ ಹೊರತು ನಮ್ಮ ಹೋರಾಟಕ್ಕೆ ರಾಜಕೀಯ (Political) ಉದ್ದೇಶವಿಲ್ಲ. ನಗರಸಭೆ (City Municipal Council) ಆಡಳಿತದ ಬಗ್ಗೆ ಆಡಳಿತ ಪಕ್ಷದ ಸದಸ್ಯರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ ತೆರಳುವರು. ಕಚೇರಿಯಲ್ಲಿ ಸಿಬ್ಬಂದಿಯೇ ಇರುವುದಿಲ್ಲ. ಖಾತೆಗಳಿಗಾಗಿ ಜನರು ಅಲೆಯುವಂತಾಗಿದೆ. ವಾರ್ಡ್‌ಗಳಲ್ಲಿನ ಸಮಸ್ಯೆ ಪರಿಹಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನ ವಾಗುತ್ತಿಲ್ಲ. ಇವರ ವರ್ತನೆಯಿಂದ ಬೇಸತ್ತು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ನಗರಸಭೆ ಸದಸ್ಯ ನರಸಿಂಹಮೂರ್ತಿ ತಿಳಿಸಿದರು.

ನಗರಸಭೆ ಸದಸ್ಯರಾದ ಅಂಬರೀಶ್, ಜಯಲಕ್ಷ್ಮಿ, ನೇತ್ರಾವತಿ, ಅಂಬಿಕಾ, ಕೆ.ಆರ್.ದೀಪಕ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ್, ಮುಖಂಡರಾದ ರಾಜಶೇಖರ್, ಸಂತೋಷ್‌ ರಾಜ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

0.00 avg. rating (0% score) - 0 votes
- Advertisement -
RELATED ARTICLES

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!