ತಾಲ್ಲೂಕು ಕಾಂಗ್ರೆಸ್‌ ಕಾರ್ಮಿಕ ಘಟಕ ಅಧ್ಯಕ್ಷರ ನೇಮಕ

- Advertisement -
- Advertisement -

Sidlaghatta : ಮುಂದಿನ ಲೋಕಸಭಾ ಚುನಾವಣೆ ಸೇರಿದಂತೆ ಎಲ್ಲ ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷವು ಗೆಲುವು ಸಾಧಿಸಬೇಕು. ಪಕ್ಷವನ್ನು ತಳಮಟ್ಟದಿಂದ ಇನ್ನಷ್ಟು ಸಂಘಟಿಸಲು ಎಲ್ಲ ಕಾರ್ಯಕರ್ತರು ಮುಖಂಡರು ಶ್ರಮಿಸಬೇಕಿದೆ ಎಂದು ಕಾಂಗ್ರೆಸ್ ಮುಖಂಡ, ಕೆಪಿಸಿಸಿ ಕೋ ಆರ್ಡಿನೇಟರ್ ರಾಜೀವ್‌ಗೌಡ ತಿಳಿಸಿದರು.

ಶಿಡ್ಲಘಟ್ಟದಲ್ಲಿನ ಎಬಿಡಿ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಮಿಕ ಘಟಕದ ಶಿಡ್ಲಘಟ್ಟ ತಾಲ್ಲೂಕು ಅಧ್ಯಕ್ಷರಾಗಿ ನೇಮಕವಾದ ನಗರದ ಕುರುಬರಪೇಟೆಯ ವಾಸಿ ಎಂ.ರಮೇಶ್ ಅವರಿಗೆ ನೇಮಕಾತಿಯ ಆದೇಶ ಪತ್ರವನ್ನು ನೀಡಿ ಅವರು ಮಾತನಾಡಿದರು.

ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಬಲಿಷ್ಠವಾಗಿದ್ದು ಕಾರ್ಯಕರ್ತರು ದೃತಿಗೆಡಬೇಕಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಮತದಾರರು ಹಾಗೂ ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು.

ಆ ಮೂಲಕ ಪಕ್ಷದತ್ತ ಒಲವು ಹೆಚ್ಚಿಸುವ ಮೂಲಕ ಪಕ್ಷದ ಬಲವನ್ನು ಹೆಚ್ಚಿಸಬೇಕು. ಪಕ್ಷವನ್ನು ನಾವು ಬಲಿಷ್ಠಗೊಳಿಸಿದರೆ ಮುಂದೊಂದು ದಿನ ಪಕ್ಷ ನಮ್ಮೊಂದಿಗೆ ಇರಲಿದೆ ಎಂದರು.

ಕಾರ್ಮಿಕ ಘಟಕದ ಅಧ್ಯಕ್ಷರಾಗಿ ಶಿಡ್ಲಘಟ್ಟ ನಗರದ ಕುರುಬರಪೇಟೆಯ ಎಂ.ರಮೇಶ್‌ರವರನ್ನು ಪಕ್ಷವು ನೇಮಿಸಿದ್ದು ಅವರು ಕಾರ್ಮಿಕರನ್ನು ಸಂಘಟಿಸುವ ಕೆಲಸಕ್ಕೆ ಎಲ್ಲರ ಸಹಕಾರ ನೆರವು ಇರಬೇಕೆಂದು ಬಯಸಿದರು. ರಮೇಶ್ ಅವರಿಗೆ ನೇಮಕಾತಿ ಪತ್ರವನ್ನು ವಿತರಿಸಿದರು.

ಕಾಂಗ್ರೆಸ್‌ನ ಕಾರ್ಮಿಕ ಘಟಕದ ಅಧ್ಯಕ್ಷ ಎಂ.ರಮೇಶ್, ಮುಖಂಡರಾದ ಟಿ.ಕೆ.ನಟರಾಜ್, ನಗರಸಭೆ ಸದಸ್ಯ ಎಲ್.ಅನಿಲ್‌ಕುಮಾರ್, ಗಫೂರ್, ಶ್ರೀನಿವಾಸ್, ಮೌಲಾ, ನರೇಂದ್ರ ಹಾಜರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!