Gudibande : ಗುಡಿಬಂಡೆಯ ಅಂಬೇಡ್ಕರ್ ವೃತ್ತದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಸಂವಿಧಾನ ಜಾಗೃತಿ ಜಾಥಾ (Constitution awareness jatha) ಹಾಗೂ ಸ್ಥಬ್ದ ಚಿತ್ರ ಮೆರವಣಿಗೆ ನಡೆಸಲಾಯಿತು. ಗುಡಿಬಂಡೆ ಪಟ್ಟಣದ ಮುಖ್ಯ ಬೀದಿಯಲ್ಲಿ ತಮಟೆ ಕಲಾವಿದರು, ವಿವಿಧ ಕಲಾ ತಂಡಗಳು, ವಾದ್ಯಗಳೊಂದಿಗೆ ಅಧಿಕಾರಿಗಳು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಮುಖಂಡರು ಮೆರವಣಿಗೆ ನಡೆಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ “ಅಂಬೇಡ್ಕರ್ ಬರಿ ವ್ಯಕ್ತಿಯಲ್ಲ ಅವರು ಈ ದೇಶದ ಶಕ್ತಿ, ಅವರು ಪ್ರತಿಯೊಬ್ಬರಿಗೂ ನ್ಯಾಯ ಹಾಗೂ ಸಮಾನ ಗೌರವ ಸಿಗಲಿ ಎಂಬ ಕಾರಣದಿಂದ ಸಂವಿಧಾನ ರಚಿಸಿದ್ದಾರೆ” ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ತೇಜಾನಂದರೆಡ್ಡಿ, ನೋಡಲ್ ಅಧಿಕಾರಿ ಇಡ್ರಹಳ್ಳಿ ಪಾಂಡುರಂಗ, ಇಒ ಹೇಮಾವತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ. ನಾರಾಯಣಸ್ವಾಮಿ, ನಯಜ್ ಬೇಗ್, ಸಬಾ ಶಿರಿನ್, ಮುನೇಗೌಡ, ನಗೀನ್ ತಾಜ್, ವಿಕಾಸ, ಲಕ್ಷ್ಮಿಪತಿ ರೆಡ್ಡಿ, ಸುಬ್ಬರಾಯಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.