Gauribidanur : ಗೌರಿಬಿದನೂರು ತಾಲ್ಲೂಕಿನ ಡಿ.ಪಾಳ್ಯದಲ್ಲಿ (D Palya) ಭಾನುವಾರ ರಾಜನಹಳ್ಳಿ ಪ್ರಸನ್ನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ನೂತನ ವಾಲ್ಮೀಕಿ ಭವನ ಉದ್ಘಾಟನೆ ಮತ್ತು ಮಹರ್ಷಿ ವಾಲ್ಮೀಕಿ ಪ್ರತಿಮೆಯನ್ನು ಪ್ರತಿಷ್ಠಾಪನೆ (Valmiki Statue Inauguration) ಕಾರ್ಯಕ್ರಮ ನಡೆಸಲಾಯಿತು. ಪೂರ್ಣಕುಂಭ ಕಳಸಗಳೊಂದಿಗೆ ಸ್ವಾಗತಿಸಿದ ಗ್ರಾಮದ ಮಹಿಳೆಯರು ಮತ್ತು ಅಪಾರ ಜನಸ್ತೋಮದ ಮಧ್ಯೆ ವಿವಿಧ ಕಲಾ ತಂಡಗಳೊಂದಿಗೆ ಗಣ್ಯರು ವೇದಿಕೆಯತ್ತ ಸಾಗಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಪ್ರಸನ್ನಾನಂದ ಪುರಿ ಸ್ವಾಮೀಜಿ “ವಾಲ್ಮೀಕಿ ಸಮುದಾದ ಆರಾಧ್ಯ ದೈವ ಮಹರ್ಷಿ ವಾಲ್ಮೀಕಿ ರಾಮಾಯಣ ರಚಿಸಿ ಸರ್ವಧರ್ಮ ಪರಿಪಾಲನೆ ತತ್ವ ಸಾರಿದರು. ಕ್ಷೇತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಭವನ ಮತ್ತು ಪುತ್ಥಳಿ ನಿರ್ಮಾಣ ಮಾಡಿರುವುದು ಸಂತಸದ ಸಂಗತಿ” ಎಂದು ಹೇಳಿದರು.
ಮುಖಂಡರಾದ ಕೆ.ಎಚ್.ಪುಟ್ಟಸ್ವಾಮಿಗೌಡ, ಆರ್.ಅಶೋಕ್ ಕುಮಾರ್, ಎನ್.ಬಾಬಣ್ಣ, ಪಿ.ವಿ.ರಾಘವೇಂದ್ರ ಹನುಮಾನ್, ಕೆ.ಸುಧಾಕರ್, ಜಯಲಕ್ಷ್ಮಮ್ಮ, ನಾರಾಯಣಸ್ವಾಮಿ, ಎಚ್.ವಿ.ಮಂಜುನಾಥ, ಜೆ.ಕಾಂತರಾಜ್, ಎಂ.ನರಸಿಂಹಮೂರ್ತಿ, ಲಕ್ಷ್ಮಣರಾವ್, ಕೆ.ಎನ್.ವೆಂಕಟರಾಮರೆಡ್ಡಿ, ಶ್ರೀರಾಮರೆಡ್ಡಿ, ನರಸಿಂಹಯ್ಯ, ಕೊಂಡಪ್ಪ, ರಂಗರಾಜು, ಗಂಗಾಧರಪ್ಪ, ಅಶೋಕ್, ಅನಂತರಾಜು, ನಂಜುಂಡಪ್ಪ ಮತ್ತಿತರರು ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur