ಭೂಸ್ವಾಧೀನ ಪರಿಹಾರ: ರೈತರೊಂದಿಗೆ ಜಿಲ್ಲಾಧಿಕಾರಿ ಜಿ. ಪ್ರಭು ಸಭೆ

- Advertisement -
- Advertisement -

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲ್ಲೂಕಿನ ಭಕ್ತರಹಳ್ಳಿ ಕೆರೆ ಕೆಳಭಾಗದಲ್ಲಿ ಹೊಸ ಕೆರೆ ನಿರ್ಮಾಣದ ಸಾರ್ವಜನಿಕ ಉದ್ದೇಶದ ಕಾಮಗಾರಿಗಾಗಿ ಭೂಸ್ವಾಧೀನಕ್ಕೆ ಒಳಪಡುವ ರೈತರ ಹಿತಾಸಕ್ತಿ ಕಾಪಾಡುವ ಜೊತೆಗೆ, ನಿಯಮಾನುಸಾರ ಸೂಕ್ತ ಪರಿಹಾರ ಧನವನ್ನು ತ್ವರಿತವಾಗಿ ಒದಗಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಪ್ರಭು ಭರವಸೆ ನೀಡಿದ್ದಾರೆ.

Quick facts: DC G. Prabhu met farmers affected by land acquisition for a new lake project near Bhaktarahalli, Chintamani taluk, and assured a fair, guideline-value-based compensation review after hearing their objections over the offered rate.

DC G Prabhu land acquisition farmers meeting Chikkaballapur

ಎಲ್ಲಿ, ಏಕೆ ಭೂಸ್ವಾಧೀನ?

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಸದರಿ ಯೋಜನಾ ಭಾಗದ ರೈತರೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಜಿ. ಪ್ರಭು, ಕಾಮಗಾರಿಯ ಉದ್ದೇಶ, ಭೂಸ್ವಾಧೀನ ಪ್ರಕ್ರಿಯೆ ಹಾಗೂ ರೈತರಿಗೆ ದೊರೆಯಲಿರುವ ಪರಿಹಾರದ ಕುರಿತು ವಿವರಿಸಿದರು. ಚಿಂತಾಮಣಿ ತಾಲ್ಲೂಕಿನ ಭಕ್ತರಹಳ್ಳಿ ಹಾಗೂ ಯಶವಂತಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಸಾರ್ವಜನಿಕ ಉದ್ದೇಶದ ಕಾಮಗಾರಿಗೆ ಅಗತ್ಯವಿರುವ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳುವ ಸಂಬಂಧ ಸರ್ಕಾರದ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

ರೈತರ ಆಕ್ಷೇಪ ಏನು?

ಭಕ್ತರಹಳ್ಳಿ ಗ್ರಾಮದ ಬಳಿಯ ಜಮೀನಿಗೆ ಸರ್ಕಾರಿ ಮಾರ್ಗಸೂಚಿ ಮೌಲ್ಯದಂತೆ (ಎಸ್‌ಆರ್ ಮೌಲ್ಯ) ಗುಂಟೆಗೆ ಸುಮಾರು ₹15,000 ಇದ್ದು, ನಾಲ್ಕು ಪಟ್ಟು ಲೆಕ್ಕದಲ್ಲಿ ಸುಮಾರು ₹63,400 ಪರಿಹಾರ ಧನ ದೊರೆಯಲಿದೆ. ಅದೇ ರೀತಿ ಯಶವಂತಪುರದ ಬಳಿ ಗುಂಟೆಗೆ ಸುಮಾರು ₹5,1500 ಪರಿಹಾರ ನಿಗದಿಯಾಗಿರುವುದನ್ನು ರೈತರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ರೈತರು, ತಮ್ಮ ಜಮೀನುಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ ಎಕರೆಗೆ ಸುಮಾರು ₹70 ರಿಂದ ₹80 ಲಕ್ಷದವರೆಗೆ ಇದೆ ಎಂದು ತಿಳಿಸಿ, ಮಾರುಕಟ್ಟೆ ವಾಸ್ತವಿಕತೆಯನ್ನು ಪರಿಗಣಿಸಿ ಪರಿಹಾರ ಧನ ನಿಗದಿಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಜಿಲ್ಲಾಧಿಕಾರಿ ಭರವಸೆ ಏನು?

ರೈತರ ಮನವಿಯನ್ನು ಆಲಿಸಿದ ಜಿಲ್ಲಾಧಿಕಾರಿ, ರೈತರು ತಿಳಿಸಿರುವ ಮಾರುಕಟ್ಟೆ ಮೌಲ್ಯ ಸೇರಿದಂತೆ ಸಂಬಂಧಪಟ್ಟ ಅಂಶಗಳನ್ನು ಪರಿಶೀಲಿಸಲಾಗುವುದು, ಸರ್ಕಾರದ ನಿಯಮಗಳು ಹಾಗೂ ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಪರಿಹಾರ ಧನದ ಬಿಡುಗಡೆಯಲ್ಲಿ ಯಾವುದೇ ರೀತಿಯ ಕಾಲ ವಿಳಂಬವಾಗದಂತೆ ಕ್ರಮ ವಹಿಸಲಾಗುವುದು ಎಂದೂ ಅವರು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ಅಶ್ವಿನ್, ಚಿಂತಾಮಣಿ ತಹಶೀಲ್ದಾರ್ ಸುಧರ್ಶನ್ ಯಾದವ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ರೈತರು ಹಾಜರಿದ್ದರು.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ)

Why is land being acquired near Bhaktarahalli?
For a new lake construction project below the existing Bhaktarahalli lake in Chintamani taluk, a public-purpose government work.
What compensation did the government offer, and what did farmers demand?
The government guideline-value based offer was about Rs 63,400/guntha near Bhaktarahalli, but farmers said the current market value runs Rs 70-80 lakh/acre and sought a market-realistic review.
What did DC G. Prabhu assure farmers?
He assured a review of the farmers’ cited market values and available documents, and instructed officials to avoid any delay in releasing compensation.

Stay tuned for more local updates.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here

Captcha verification failed!
CAPTCHA user score failed. Please contact us!