Gauribidanur : DCC Bank ಹಾಗೂ ಸ್ಥಳೀಯ VSSN ವತಿಯಿಂದ ಗೌರಿಬಿದನೂರು ತಾಲ್ಲೂಕಿನ ಇಡಗೂರು ಗ್ರಾಮದಲ್ಲಿ ಭಾನುವಾರ ATM Card ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ (N H Shivashankar Reddy) “DCC Bank ವತಿಯಿಂದ ಪಡೆದ ಸಾಲವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು, ಆರ್ಥಿಕವಾಗಿ ಸಬಲರಾಗಿ ಸಕಾಲದಲ್ಲಿ ಮರುಪಾವತಿ ಮಾಡಬೇಕು” ಎಂದು ತಿಳಿಸಿದರು.
VSSN ಕಾರ್ಯದರ್ಶಿ ವೀರಪ್ಪ ಮಾತನಾಡಿ “ಕೋಲಾರ (Kolar), ಚಿಕ್ಕಬಳ್ಳಾಪುರ (Chikkaballapur) ಡಿಸಿಸಿ ಬ್ಯಾಂಕ್ (DCC Bank) ಆರ್ಥಿಕ ನೆರವಿನಿಂದ ಇಡಗೂರು VSSN ಮೂಲಕ 26 ಮಹಿಳಾ ಸಂಘಗಳಿಗೆ ಒಟ್ಟು ₹ 1.30 ಕೋಟಿ ಸಾಲ ವಿತರಣೆ ಮಾಡಲಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಮರಳೂರು ಹನುಮಂತರೆಡ್ಡಿ, ಜಿ.ಪಂ ಮಾಜಿ ಅಧ್ಯಕ್ಷ ಸಿ.ಆರ್.ನರಸಿಂಹಮೂರ್ತಿ, ಕೆ.ನರಸಿಂಹಮೂರ್ತಿ, ಉಪಾಧ್ಯಕ್ಷ ಕೊಡಪಣ್ಣ, ಎಚ್.ಎನ್.ಪ್ರಕಾಶರೆಡ್ಡಿ, ಜಿ.ನರಸಿಂಹಮೂರ್ತಿ, ಸೋಮಶೇಖರ ಗೌಡ, ಜಿ.ಸೋಮಯ್ಯ, ನಾಗರಾಜು, ಭೀಮರಾಜ್, ಬಿ.ರಂಗಪ್ಪ, ತಿಮ್ಮಾರೆಡ್ಡಿ, ಬಸವರಾಜ್, ಆರ್.ವೆಂಕಟಾಚಲ, ಜಯರಾಮ್, ಆನಂದಪ್ಪ, ನಾಗಮಣಿ, ಲಕ್ಷ್ಮಿಪತಿ ಮತ್ತಿತರರು ಭಾಗವಹಿಸಿದ್ದರು.