19.8 C
Bengaluru
Tuesday, February 17, 2026

40 ವರ್ಷದ ಬಳಿಕ ಜೆಡಿಎಸ್ ವಶವಾದ ದೇವರುಮಳ್ಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ

- Advertisement -
- Advertisement -

Devaramallur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ದೇವರಾಜು ಮತ್ತು ಉಪಾಧ್ಯಕ್ಷರಾಗಿ ಕೇಶವರೆಡ್ಡಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.

ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ ದೇವರಾಜ್ ಮಾತನಾಡಿ, ಕ್ಷೇತ್ರದ ಶಾಸಕ ಬಿ.ಎನ್. ರವಿಕುಮಾರ್ ಅವರು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಜನ 40 ವರ್ಷದ ಬಳಿಕ ಡೇರಿ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರಿಗೆ ಹೆಚ್ಚಿನ ಅವಕಾಶ ಕಲ್ಪಿಸಿ ಅಧಿಕಾರದ ಅವಕಾಶ ಲಭಿಸಿದೆ. ಈ ಅವಧಿಯಲ್ಲಿ ಸಂಘದ ನಿರ್ದೇಶಕರು ಮತ್ತು ಹಿರಿಯ ಮುಖಂಡರ ಗ್ರಾಮಸ್ಥರ ಸಲಹೆ ಸೂಚನೆಗಳನ್ನು ಪಡೆದು ಸಂಘದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.

ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರುಗಳಾದ ಶಶಿಕುಮಾರ್, ಕೆ ಮುನಿರೆಡ್ಡಿ, ಆನಂದ್, ಬಿ.ಎಲ್. ನಂಜುಂಡಪ್ಪ, ವೆಂಕಟೇಶಪ್ಪ ರಾಧಮ್ಮ, ಲಿಂಗಪ್ಪ, ಡಿ.ಎನ್.ಕೃಷ್ಣಪ್ಪ, ಗೌರಮ್ಮ, ಬೈರಮ್ಮ ಎಂಪಿಸಿಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ಜೆಡಿಎಸ್ ಮುಖಂಡರಾದ ಕೆಂಪಣ್ಣ, ಆಂಜನಪ್ಪ, ಮನೋಹರ್, ಕೇಶವಮೂರ್ತಿ, ಮುರಳಿ ,ಕೆ.ಎಸ್.ಕೆಂಪಣ್ಣ, ಮಂಜುನಾಥ್, ನಾರಾಯಣಸ್ವಾಮಿ, ಸುರೇಶ್, ಮುನಿರಾಜು, ದ್ಯಾವಮ್ಮ ಸಿ.ಆರ್. ರಮೇಶ್, ಬಿ.ಮುನಿರೆಡ್ಡಿ ಹಾಗೂ ಗ್ರಾಮಸ್ಥರು ಹಾಜರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!