Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ದಿಬ್ಬೂರು (Dibbur) ಗ್ರಾಮದಲ್ಲಿ ಭಾನುವಾರ ಯೋಗಿನಾರೇಯಣ ಮಠದಿಂದ (Sri Kaiwara Yogi Nareyana Mutt) ‘ಆತ್ಮಬೋಧಾಮೃತ’ (Athmabodhamrutha) ಕಾರ್ಯಕ್ರಮ ನಡೆಯಿತ್ತು. ಗ್ರಾಮಸ್ಥರು ಕೈವಾರದ ಧರ್ಮಾಧಿಕಾರಿ ಎಂ.ಆರ್.ಜಯರಾಮ್ (Dr. M. R. Jayaram) ಅವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿ ಗ್ರಾಮದ ಪ್ರಮುಖ ರಸ್ತೆಯಲ್ಲಿ ಶೋಭಾಯಾತ್ರೆ ನಡೆಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಂ.ಆರ್.ಜಯರಾಮ್ “ಕೈವಾರ ತಾತಯ್ಯನವರು ತಮ್ಮ ತತ್ವಗಳಲ್ಲಿ ಮಾನವ ಜನ್ಮದ ಮಹತ್ವವನ್ನು ತಿಳಿಸಿದ್ದಾರೆ. ನಿಷ್ಕಾಮವಾಗಿ ಸದಾಕಾಲ ಆತ್ಮದಲ್ಲಿ ಗುರುವಿನ ಚಿಂತನೆಯನ್ನು ಮಾಡಿದಾಗ ಆತ್ಮಪ್ರಕಾಶವಾಗುತ್ತದೆ. ಪ್ರಾಪಂಚಿಕ ಭೋಗದಲ್ಲಿ ಆಸಕ್ತವಾದರೆ ಮನಸ್ಸು ಬಂಧನವಾಗುತ್ತದೆ, ಮನುಷ್ಯನಿಗೆ ಬಂಧಕ್ಕೂ ಮೋಕ್ಷಕ್ಕೂ ಮನಸ್ಸೇ ಕಾರಣ ಭೋಗಚಿಂತನೆಯಿಂದ ಮುಕ್ತವಾದರೆ ಮನಸ್ಸು ಮುಕ್ತಿಗೆ ಕಾರಣವಾಗುತ್ತದೆ” ಎಂದು ಹೇಳಿದರು.
ರಾಮಕೋಟಿ ಸಮಿತಿಯ ಅಧ್ಯಕ್ಷ ಪುರದಗಡ್ಡೆ ಕೃಷ್ಣಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ಎಸ್.ಸುಬ್ಬರಾಯಪ್ಪ, ತಿಪ್ಪೇನಹಳ್ಳಿ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ರಂಗಪ್ಪ, ಬಳೇಸ್ವಾಮಿ, ಪೋಸ್ಟ್ ಬೈರಪ್ಪ, ಮಂಚನಬಲೆ ಲಕ್ಷ್ಮಣ್, ರಮೇಶ್, ಗುಡಿಬಂಡೆ ಗಂಗಾಧರ್, ಗಂಗರೇಕಾಲುವೆ ಲಕ್ಷ್ಮಣಾಚಾರ್, ತಾಳಹಳ್ಳಿ ಮುನಿಯಪ್ಪ, ವಾನರಾಶಿ ಬಾಲಕೃಷ್ಣ ಭಾಗವತರ್, ಟ್ರಸ್ಟ್ ಉಪಾಧ್ಯಕ್ಷರಾದ ಜೆ.ವಿಭಾಕರರೆಡ್ಡಿ, ಟ್ರಸ್ಟ್ ಸದಸ್ಯರಾದ ಬಾಗೇಪಲ್ಲಿ ಕೆ.ನರಸಿಂಹಪ್ಪ, ಪುರಸಭಾ ನಿವೃತ್ತ ಮುಖ್ಯ ಆಡಳಿತಾಧಿಕಾರಿ ಭದ್ರಾಚಲಂ ಮತ್ತಿತರರು ಉಪಸ್ಥಿತರಿದ್ದರು.