Dibbur / Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ದಿಬ್ಬೂರು ಗ್ರಾಮದಲ್ಲಿ ಭಾನುವಾರ 7ನೇ ವರ್ಷದ ಮಹಾಶಕ್ತಿ ಕರಗದಮ್ಮ ದೇವಿಯ ಕರಗ (Karaga) ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಆಂಧ್ರ ಪ್ರದೇಶದ (Andhrapradesh) ಕುಪ್ಪಂನ ಬಾಲಾಜಿರವರು ಹೊತ್ತಿದ್ದ ಕರಗ ಕರಗದಮ್ಮ ದೇವಿಯ ದೇಗುಲದಿಂದ ಗ್ರಾಮದ ಬೀದಿಗಳಲ್ಲಿ ಸಂಚರಿಸಿತು.
ಕರಗ ಮಹೋತ್ಸವಕ್ಕೆ ಚಾಲನೆ ದೊರೆಯುವಾಗ ಗ್ರಾಮಸ್ಥರು, ವಿವಿಧ ಹಳ್ಳಿಗಳ ಅನೇಕ ಭಕ್ತರು ಚಪ್ಪಾಳೆ ಹೊಡೆಯುತ್ತ ಸಂಭ್ರಮಿಸಿದರು.