19.8 C
Bengaluru
Tuesday, February 17, 2026

ರಾಷ್ಟ್ರೀಯ ಸೇವಾ ಯೋಜನಾ ಶಿಬಿರವನ್ನು ಉದ್ಘಾಟಿಸಿದ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ

- Advertisement -
- Advertisement -

Gauribidanur : ಗೌರಿಬಿದನೂರು ತಾಲೂಕಿನ ಕೆಂಕರೆ ಗ್ರಾಮದಲ್ಲಿ AES ರಾಷ್ಟ್ರೀಯ ಪದವಿ ಕಾಲೇಜು ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನಾ ಶಿಬಿರವನ್ನು (National Service Project Camp) ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಉದ್ಘಾಟಿಸಿದರು.


ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಸೇವಾ ಮನೋಭಾವವನ್ನು ಮೇಳೈಸಿ ಉಜ್ವಲ ಭವಿಷ್ಯಕ್ಕೆ ದಾರಿ ಮಾಡಿಕೊಡುವ ಮಹತ್ವವನ್ನು ತಿಳಿಸಿದರು. ಶಾಲಾ-ಕಾಲೇಜುಗಳೇ ಆಗಿರಲಿ, ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳಲ್ಲಿ ಸೇವಾ ಮೌಲ್ಯಗಳನ್ನು ತುಂಬುವುದು ಅವರ ಸರ್ವಾಂಗೀಣ ಅಭಿವೃದ್ಧಿಗೆ ಬಹುಮುಖ್ಯವಾಗಿದೆ ಎಂದು ಹೇಳಿ, ತರ್ಕಬದ್ಧ ವಿಚಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ಮೂಢನಂಬಿಕೆಗಳು ಹಾಗೂ ಪೂರ್ವಾಗ್ರಹಗಳನ್ನು ಬಿಡುವ ಮೂಲಕ ಯುವ ಪೀಳಿಗೆಯು ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಮುದುಗೆರೆ ನಾಗರಾಜಪ್ಪ, ಪ್ರಾಂಶುಪಾಲ ಡಾ.ಎನ್.ಸೋಮಶೇಖರ್, ಉಪಪ್ರಾಂಶುಪಾಲ ಎಂ.ಜಗದೀಶ್, ಕಾರ್ಯಕ್ರಮಾಧಿಕಾರಿ ಹೊಸ ಉಪ್ಪಾರಹಳ್ಳಿ ನಾಗರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!