Gauribidanur : ಗೌರಿಬಿದನೂರು ನಗರದ ಸಮಾನತಾ ಸೌಧದಲ್ಲಿ, ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಮತ್ತು ದೇವರಾಜ್ ಅರಸು ಅಭಿವೃದ್ಧಿ ನಿಗಮದ ವತಿಯಿಂದ 15 ಫಲಾನುಭವಿಗಳಿಗೆ ತ್ರಿಚಕ್ರ ವಾಹನ 37 ಮಹಿಳೆಯರಿಗೆ ಹೂಲಿಗೆ ಯಂತ್ರಗಳನ್ನು (3 wheelers distribution) ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆಎಚ್.ಪುಟ್ಟಸ್ವಾಮಿಗೌಡರು ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಸುಮಾರು ₹3ಕೋಟಿ ವೆಚ್ಚದಲ್ಲಿ, ರಸ್ತೆ ಅಭಿವೃದ್ಧಿ ಕಾಮಗಾರಿ, ಶಾಲಾ ಕಟ್ಟಡ ನಿರ್ಮಾಣ, ಅಂಗನವಾಡಿ ಕಟ್ಟಡ ನಿರ್ಮಾಣ ಮುಂತಾದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆ ಎಇಇ ಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್, ಸಿಡಿಪಿಒ ಇಲಾಖೆಯ ಮೂಕಾಂಬಿಕಾ, ದೇವರಾಜ್ ಅರಸು ಅಭಿವೃದ್ಧಿ ನಿಗಮದ ಶಿವಾನಂದ ರೆಡ್ಡಿ, ಜಗದೀಶ್, ಜೆ.ಕಾಂತರಾಜು, ಶ್ರೀನಿವಾಸ ಗೌಡ, ವೆಂಕಟರಾಮರೆಡ್ಡಿ, ಬಿ.ಜಿ.ವೇಣುಗೋಪಾಲರೆಡ್ಡಿ, ರಾಘವೇಂದ್ರ ಹನುಮಾನ್, ಬಿವಿ.ಗೋಪಿನಾಥ್, ರಂಗರಾಜು, ಗಂಗಾಧರಪ್ಪ, ಲಕ್ಷ್ಮಣ್ ರಾವ್, ಆರ್.ಆರ್.ರೆಡ್ಡಿ, ಪವನ್ ರೆಡ್ಡಿ ಭಾಗವಹಿಸಿದ್ದರು.