Friday, March 24, 2023
HomeGauribidanurಅಮೃತ ಮಹೋತ್ಸವ ಅಂಗವಾಗಿ 75 ಸೂರ್ಯ‌ ನಮಸ್ಕಾರ

ಅಮೃತ ಮಹೋತ್ಸವ ಅಂಗವಾಗಿ 75 ಸೂರ್ಯ‌ ನಮಸ್ಕಾರ

- Advertisement -
- Advertisement -
- Advertisement -
- Advertisement -

Gauribidanur : ಗೌರಿಬಿದನೂರು ನಗರದ ನೇತಾಜಿ ಕ್ರೀಡಾಂಗಣದಲ್ಲಿ(Netaji Stadium) ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (Sri Patanjali Yoga Shikshana Vishwast Mandali) ಹಾಗೂ ಶ್ರೀ ಪತಂಜಲಿ ಯೋಗ ಶಿಕ್ಷಣ ವಿಶ್ವಸ್ಥ ಮಂಡಳಿ ಮತ್ತು ಶ್ರೀ ಪತಂಜಲಿ ಯೋಗ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹನುಂತಪುರ ಇವರ ಸಹಯೋಗದಲ್ಲಿ ಭಾನುವಾರ ಬೆಳಿಗ್ಗೆ 75 ನೇ ವರ್ಷದ ಸ್ವಾತಂತ್ರ್ಯ ದಿನದ (India Independence) ಅಮೃತ ಮಹೋತ್ಸವ ಅಂಗವಾಗಿ 75 ಸೂರ್ಯ‌ ನಮಸ್ಕಾರ (Surya Namaskara) ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾನಾಡಿದ ಶಾಸಕ ಎನ್‌.ಎಚ್.ಶಿವಶಂಕರರೆಡ್ಡಿ” ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಅರ್ಥಪೂರ್ಣವಾದ ಕಾರ್ಯಕ್ರಮ ಆಯೋಜಿಸಿದ್ದಾರೆ. ಯೋಗ ಮತ್ತು ಪ್ರಾಣಯಾಮ ಎರಡನ್ನೂ ನಿಯಮಿತವಾಗಿ ಮಾಡುವುದರಿಂದ ದೇಹ‌ ಮತ್ತು ಆತ್ಮ ಎರಡನ್ನೂ ಶುದ್ಧಿಯಾಗಿಸಿಕೊಂಡು ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ. 75ನೇ ಸ್ವಾತಂತ್ರ್ಯ ಸಂಗ್ರಾಮದ ಸ್ಮರಣೆ ಅಂಗವಾಗಿ 75 ಸೂರ್ಯ ನಮಸ್ಕಾರ ಮಾಡುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ CPI ಎಸ್‌.ಡಿ.ಶಶಿಧರ್, ನಗರಸಭೆ ಅಧ್ಯಕ್ಷರಾದ ಎಸ್.ರೂಪ, ಯೋಗ ಬಂಧುಗಳಾದ ಕೃಷ್ಣಮೂರ್ತಿ, ಚಿಕ್ಕನರಸಿಂಹಪ್ಪ, ಸೂರ್ಯಪ್ರಕಾಶ್, ಸುರೇಶ್ ಕುಮಾರ್, ಗೋಪಾಲ್ ಆಶಾಕಿರಣ, ಅನುರಾಧ, ಸುಜಾತ, ಶಶಿಕಲಾ, ರಮೇಶ್, ಜಗದೀಶ್, ಆದಿಗೋಪಾಲ್, ಚಂದ್ರಶೇಖರ್ ಉಪಸ್ಥಿತರಿದ್ದರು.

0.00 avg. rating (0% score) - 0 votes
- Advertisement -
RELATED ARTICLES

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!