Gauribidanur : ಗೌರಿಬಿದನೂರು ತಾಲ್ಲೂಕಿನ ತೊಂಡೇಬಾವಿ ಹೋಬಳಿಯ ದೊಡ್ಡಹನುಮೇನಹಳ್ಳಿ ಬಳಿ ಭಾನುವಾರ ದ್ವಿಚಕ್ರ (Bike) ವಾಹನ ಹಾಗೂ ಖಾಸಗಿ ಬಸ್ (Private Bus) ನಡುವೆ ನಡೆದ ಅಪಘಾತದಲ್ಲಿ (Accident) ಗೌರಿಬಿದನೂರು ತಾಲ್ಲೂಕಿನ ಅಲೀಪುರದ ಅನಿತ (30), ಹರೀಶ (35), ತೇಜು (4) ಸಾವನ್ನಪ್ಪಿದ್ದು, ರಮೇಶ (25) ಮತ್ತು ಜಾನು (6) ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲಾಗಿದೆ.
ಮಂಚೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದೊಡ್ಡಹನುಮೇನಹಳ್ಳಿ ಕಡೆಯಿಂದ ತೊಂಡೇಬಾವಿ ಕಡೆಗೆ ಸಾಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಬೆಂಗಳೂರು ಕಡೆಯಿಂದ ಆಗಮಿಸಿದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದರು.