16.2 C
Bengaluru
Saturday, January 25, 2025

DCC Bank ನಿಂದ ರೈತರಿಗೆ ಸಾಲ ವಿತರಣೆ

- Advertisement -
- Advertisement -

Hosur, Gauribidanur : ಗೌರಿಬಿದನೂರು ತಾಲ್ಲೂಕಿನ ಹೊಸೂರಿನಲ್ಲಿ ಶನಿವಾರ ಸ್ಥಳೀಯ VSSN ವತಿಯಿಂದ ಆಯೋಜಿಸಿದ್ದ DCC Bank ಹಾಗೂ NABARD ಸಹಯೋಗದೊಂದಿಗೆ ರೈತರಿಗೆ KCC ಮತ್ತು ಮಹಿಳಾ ಸ್ವಸಹಾಯ ಸಂಘಗಳಿಗೆ Credit Card ವಿತರಣಾ ಕಾರ್ಯಕ್ರಮವನ್ನು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ (N H Shivashankara Reddy) ಅವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಡಿಸಿಸಿ ಬ್ಯಾಂಕ್ ನೀಡುವ ಸಾಲವು ಗ್ರಾಮೀಣ ಭಾಗದ ಮಹಿಳೆಯರ ಸ್ವಾವಲಂಬಿ ಬದುಕಿಗೆ ಆಸರೆಯಾಗಿದೆ ಎಂದು ತಿಳಿಸಿದರು.

ಬ್ಯಾಂಕ್ ವ್ಯವಸ್ಥಾಪಕ ಮಹಮದ್ ಅಸ್ಲಾಂ ಅವರು ಮಾತನಾಡಿ ಒಟ್ಟು 47 ಮಹಿಳಾ ಸಂಘಗಳಿಗೆ ₹ 2.35 ಕೋಟಿ ಹಾಗೂ 51 ಮಂದಿ ರೈತರಿಗೆ ₹ 43 ಲಕ್ಷ ಸಾಲವನ್ನು ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹನುಮಂತರೆಡ್ಡಿ, ಬ್ಯಾಲಹಳ್ಳಿ ಗೋವಿಂದೇಗೌಡ, ಶಾರದಮ್ಮ, ಟಿ.ಎಚ್.ತಿಮ್ಮಕ್ಕ, ನಯಾಜ್, ಕೆ.ಎಸ್.ರಾಮಕೃಷ್ಣ, ಎಚ್.ಎನ್.ನಾಗರಾಜು, ಎಚ್.ನಾರಾಯಣಪ್ಪ, ಎಚ್.ಎಸ್.ನಾಗೇಶ್ ಕುಮಾರ್, ಗಂಗಾಧರಪ್ಪ, ಮುದ್ದಮ್ಮ, ಸರಸಮ್ಮ, ಎನ್.ರಾಮ ಕೃಷ್ಣಯ್ಯ, ವಿ.ರಾಮಯ್ಯ, ಸಿ.ನಾಗ ರಾಜಯ್ಯ, ಎಸ್.ಎಚ್.ಚಂದ್ರಶೇಖರ್, ಆರ್.ಲೋಕೇಶ್, ತಾರಾನಾಥ್, ತಿಮ್ಮಯ್ಯ, ಶೈಲಜಾ ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!