Gauribidanur : ಗ್ರಾಮೀಣ ಭಾಗದ ರೈತರಿಗೆ ಅಸಮರ್ಪಕ ವಿದ್ಯುತ್ (Electricity) ಪೂರೈಕೆ ಖಂಡಿಸಿ ರೈತರು ಹಾಗೂ ರೈತ ಸಂಘದ ಪದಾಧಿಕಾರಿಗಳು ಗೌರಿಬಿದನೂರು ನಗರದ ತಾ.ಪಂ. ಆವರಣದಿಂದ Bike Rally ಆರಂಭಿಸಿ ಅಂಬೇಡ್ಕರ್ ವೃತ್ತ, ನಾಗಯ್ಯರೆಡ್ಡಿ ವೃತ್ತ, ನ್ಯಾಷನಲ್ ಕಾಲೇಜು ವೃತ್ತ, ಬೆಂಗಳೂರು ರಸ್ತೆಯಲ್ಲಿ ಸಂಚರಿಸಿ ಗ್ರಾಮಾಂತರ ಪೊಲೀಸ್ ಠಾಣೆ ಮೂಲಕ BESCOM ಕಚೇರಿಗೆ ತೆರಳಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ ಬೆಸ್ಕಾಂ AEE ವಿನಯ್ ಅವರಿಗೆ ಮನವಿ ಸಲ್ಲಿಸಿದರು.
ರೈತ ದೇಶದ ಬೆನ್ನೆಲುಬೆಂದು ವೇದಿಕೆಗಳಲ್ಲಿ ಭಾಷಣ ಮಾಡುವ ಸರ್ಕಾರ ಜನಪ್ರತಿನಿಧಿಗಳು ರೈತರಿಗೆ ಕನಿಷ್ಠ ಸೌಲಭ್ಯ ನೀಡುವಲ್ಲಿ ಎಡವಿದ್ದಾರೆ. ರೈತರಿಗೆ ವಿದ್ಯುತ್ ಲೋಡ್ ಶೆಡ್ಡಿಂಗ್ (Load Shedding), ಬೆಳೆದ ಬೆಳೆಗಳಿಗೆ ಸಮರ್ಪಕವಾದ ಮಾರುಕಟ್ಟೆ ವ್ಯವಸ್ಥೆ ದೊರೆಯದೆ ಜೀವನ ಹೈರಾಣಾಗಿದೆ. ಜಾಣ ಕುರುಡು ಪ್ರದರ್ಶಿಸುವ ಮೂಲಕ ಬೆಸ್ಕಾಂ ಅಧಿಕಾರಿಗಳು ರೈತರ ಬದುಕಿನೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದು ಅನೇಕ ಬಾರಿ ಮನವಿ ಸಲ್ಲಿಸಿದರೂ ಬೇಸಿಗೆಯ ಆರಂಭದಲ್ಲೆ ಕೃಷಿ ಚಟುವಟಿಕೆಗಳಿಗೆ ಅಡಚಣೆಯಾಗುವಂತೆ ಮಾಡುತ್ತಿದ್ದಾರೆ. ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ತಾಲ್ಲೂಕಿನ ಎಲ್ಲಾ ರೈತರು BESCOM ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಎಂ.ಆರ್. ಲಕ್ಷ್ಮಿನಾರಾಯಣ್ ತಿಳಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ವಿ. ಲೋಕೇಶ್ ಗೌಡ, ರೈತರಾದ ರಾಮಚಂದ್ರ ರೆಡ್ಡಿ, ರಾಜು, ಸನತ್ ಕುಮಾರ್, ನರಸಾರೆಡ್ಡಿ, ವೆಂಕಟೇಶ್, ಆವಲಪ್ಪ ಶ್ರೀನಿವಾಸ್, ಶಶಿಧರ್, ಹನುಮಂತಪ್ಪ, ಸುಬ್ಬಾರೆಡ್ಡಿ, ಲಕ್ಷ್ಮೀ ನಾರಾಯಣ್, ವೆಂಕಟೇಶ, ನಟರಾಜ್, ಬಾಲರಾಜ್, ಬಾಬು ಪಾಲ್ಗೊಂಡಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur