Gauribidanur : ಗೌರಿಬಿದನೂರು ತಾಲ್ಲೂಕಿನ ತೊಂಡೇಬಾವಿ ಹೋಬಳಿಯ ಅಲಕಾಪುರ ಗ್ರಾಮದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಸಹಯೋಗದಲ್ಲಿ ಪಶು ಪಾಲನ ಮತ್ತು ಪಶು ವೈದ್ಯಕೀಯ ಇಲಾಖೆ ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮಕ್ಕೆ (Foot and Mouth Disease Vaccination Program) ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ” ಇತ್ತೀಚಿಗೆ ರಾಸುಗಳಲ್ಲಿ ಕಂಡುಬರುತ್ತಿರುವ ರೋಗ ರುಜಿನಗಳಿಂದ ರೈತರು ಕಂಗಾಲಾಗಿದ್ದು ಹಸುಗಳ ಆರೋಗ್ಯ ಕಾಪಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದಕ್ಕೆಲ್ಲ ಪರಿಹಾರವೆಂದರೆ ಸೂಕ್ತ ಸಮಯದಲ್ಲಿ ಹಸುಗಳಿಗೆ ಲಸಿಕೆ ಹಾಕಿಸುವುದು. ಸರಿಯಾದ ಸಮಯದಲ್ಲಿ ಲಸಿಕೆ ಹಾಕಿಸುವುದರಿಂದ ರೈತರಿಗೆ ಆರ್ಥಿಕ ಹೊರೆ ತಪ್ಪುವುದಲ್ಲದೆ, ಹಾಲಿನ ಇಳುವರಿ ಸಹ ಹೆಚ್ಚಾಗುತ್ತದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಶು ವೈದ್ಯಧಿಕಾರಿ ಡಾ. ಮಾರುತಿ ರೆಡ್ಡಿ, ಕೊಚ್ಚಿಮುಲ್ ನಿರ್ದೇಶಕ ಕಾಂತರಾಜು, ರೈತರು, ಗ್ರಾಮಸ್ಥರು ಪಾಲ್ಗೊಂಡಿದ್ದರು.