Gauribidanur : ಗೌರಿಬಿದನೂರು ನಗರದ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ದೇವಾಲಯ ಮತ್ತು ದರ್ಗಾದಲ್ಲಿ ಭಾನುವಾರ ವಿಶೇಷ ಪೂಜೆ ಸಲ್ಲಿಸುವ ಮೂಲಕ LED ಪರದೆಯುಳ್ಳು JDS ನ ಪಂಚರತ್ನ ಯೋಜನೆ (JDS Pancharatna Yojane) ಗಳ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಸಿ.ಆರ್. ನರಸಿಂಹಮೂರ್ತಿ ” ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (H D Kumarswamy) ಅವರು ಪಂಚರತ್ನ ರಥಯಾತ್ರೆ ತಾಲ್ಲೂಕು ಪ್ರವಾಸದ ಮೂಲಕ ಜೆಡಿಎಸ್ ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ನೀಡಿ ಪಕ್ಷದ ಸಂಘಟನೆಗೆ ಬಲ ನೀಡಿದ್ದಾರೆ. ಜೆಡಿಎಸ್ ಬಡವರು, ರೈತರ ಸಂಕಷ್ಟಗಳಿಗೆ ಮಿಡಿಯುವ ಹಾಗೂ ಅವರಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಪಕ್ಷವಾಗಿದ್ದು 2018ರ ವಿಧಾನಸಭೆ ಚುನಾವಣೆ ಬಳಿಕ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು, ಸುಮಾರು 25 ಸಾವಿರ ರೈತರ ಸಾಲಮನ್ನಾ ಮಾಡಿದ್ದರು. ಈ ಬಾರಿ ರಾಜ್ಯದಲ್ಲಿ ಮತ್ತೆ ಜೆಡಿಎಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ, ಆರೋಗ್ಯ, ಕೃಷಿ, ಸ್ವಾವಲಂಬಿ ಬದುಕು, ಆಸರೆ ಸೇರಿದಂತೆ ಇನ್ನಿತರ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಕಾಣಲು ಸಾಧ್ಯವಾಗುತ್ತದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ವೈ.ಎಚ್. ಚಿನ್ನಪ್ಪರೆಡ್ಡಿ , ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಸಿ. ಮಂಜುನಾಥರೆಡ್ಡಿ, ಅಲ್ಲಂಪಲ್ಲಿ ಎ.ವೇಣು, ನಾಗರಾಜ್, ವೆಂಕಟರವಣಪ್ಪ, ನಾಸೀರ್, ಬೇಗ್, ಶ್ರೀನಿವಾಸ್, ಮಂಜುನಾಥರೆಡ್ಡಿ, ನಟರಾಜ್, ಭಾಸ್ಕರ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur