Home News Gauribidanur ಕಾನೂನು ಅರಿವು ಕಾರ್ಯಾಗಾರ

ಕಾನೂನು ಅರಿವು ಕಾರ್ಯಾಗಾರ

0
227
Gauribidanur Legal Awareness Program

Gauribidanur : Rural Development Organisation Trust ವತಿಯಿಂದ ಶುಕ್ರವಾರ ಗೌರಿಬಿದನೂರು ತಾಲ್ಲೂಕಿನ ರಮಾಪುರ ಗ್ರಾಮದ ಪಂಚಾಯಿತಿ ಆವರಣದಲ್ಲಿ ಕಾನೂನು ಅರಿವು ಮತ್ತು ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ (Legal Awareness Program) ಅರಿವು ಕಾರ್ಯಾಗಾರ ನಡೆಸಿ ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್, ಪಿಂಚಣಿ ಕಾರ್ಡ್ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ನಿರ್ದೇಶಕಿ ಚಿತ್ರಾವತಿ “ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು, ಸಾಮಾಜಿಕ ಭದ್ರತೆ, ಪರಿಸರ, ಶಾಲೆ, ಆರೋಗ್ಯಕ್ಕೆ ಸಂಬಂಧಪಟ್ಟಂತೆ ವೈಯಕ್ತಿಕ ಮತ್ತು ಸಮುದಾಯದ ಸೌಲಭ್ಯ ಮತ್ತು ಕಾನೂನುಗಳ ಬಗ್ಗೆ ಅರಿವು ಮೂಡಿಸುವುದು ಮುಖ್ಯ ಉದ್ದೇಶ. ಆಯುಷ್ಮಾನ್ ಕಾರ್ಡ್, ಪಿಂಚಣಿ, ನರೇಗಾ, ಜಾಬ್‌ಕಾರ್ಡ್ ಹಾಗೂ ಭೂಮಿಗೋಸ್ಕರ ನಮೂನೆ 53 ಮತ್ತು 57ರಲ್ಲಿ ಅರ್ಜಿ ಹಾಕಿರುವ ಅರ್ಹ ಫಲಾನುಭವಿಗಳಿಗೆ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ. ತಾಲ್ಲೂಕಿನಲ್ಲಿ 300 ಜನ ಕಾಯಕ ಬಂಧುಗಳಿಗೆ ತಾಲ್ಲೂಕು ಪಂಚಾಯಿತಿಯಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಪಾರಿಜಾತ, ಕೃಷಿ ಇಲಾಖೆಯ ಮೈಲಾರಪ್ಪ, ಪಂಚಾಯಿತಿ ಅಧ್ಯಕ್ಷೆ ನಾಗಮಣಿ, ಬಾಲಗಂಗಾಧರ್, ವೆಂಕಟೇಶ್ ನಾಯಕ್, ಮಯೂರ್, ಬಸವರಾಜು, ಸ್ವಾತಿ ಪಾಲ್ಗೊಂಡಿದ್ದರು.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!