Gauribidanur : ಗೌರಿಬಿದನೂರು ತಾಲ್ಲೂಕಿನ ಮರಳೂರು ಕೆರೆ ( Marlur Lake )ಯು ತುಂಬಿ ಕೋಡಿ ಹರಿದುದ್ದರಿಂದ ಗ್ರಾಮಸ್ಥರು ಕೆರೆಯಲ್ಲಿ ಕಾರ್ತೀಕ ಮಾಸದ ಕೊನೆಯ ಸೋಮವಾರದಂದು ತೆಪ್ಪೋತ್ಸವ ಆಚರಿಸಿದರು.
ಸೋಮವಾರ ಬೆಳಿಗ್ಗೆಯಿಂದಲೇ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾಕೈಂಕರ್ಯಗಳನ್ನು ನಡೆಸಿ, ಬಳಿಕ ತಂಬಿಟ್ಟಿನ ಆರತಿ ಮಾಡಿ ದೇವಸ್ಥಾನದಲ್ಲಿರುವ ಉತ್ಸವ ಮೂರ್ತಿಯನ್ನು ಕೆರೆಯ ಬಳಿ ಕೊಂಡೊಯ್ಯಲಾಯಿತು. ಹೂವಿನ ಅಲಂಕಾರವುಳ್ಳ ತೆಪ್ಪದಲ್ಲಿ ಉತ್ಸವ ಮೂರ್ತಿಯನ್ನಿರಿಸಿ ತೆಪ್ಪೋತ್ಸವ ಆಚರಿಸಿದರು.
ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ, ಸಚಿವ ಡಾ.ಕೆ.ಸುಧಾಕರ್, ಮುಖಂಡ ಸಿ.ಆರ್.ನರಸಿಂಹಮೂರ್ತಿ, ಎಚ್.ಎನ್.ಪ್ರಕಾಶರೆಡ್ಡಿ, ಹನುಮಂತರೆಡ್ಡಿ, ರವಿನಾರಾಯಣ ರೆಡ್ಡಿ, ಆರ್.ಅಶೋಕ್ ಕುಮಾರ್, ಕೆ.ಎನ್.ಕೇಶವರೆಡ್ಡಿ, ಎನ್.ಜ್ಯೋತಿರೆಡ್ಡಿ, ಕೆ.ಎಚ್.ಪುಟ್ಟಸ್ವಾಮಿ ಗೌಡ, ಕೆ.ಕೆಂಪರಾಜು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur