Gauribidanur :ಗೌರಿಬಿದನೂರು ನಗರದಲ್ಲಿ ತಾಲ್ಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (PLD Bank) ವತಿಯಿಂದ 2022-23ನೇ ಸಾಲಿನ ಸರ್ವ ಸದಸ್ಯರ ಸಭೆ (General Body Meeting) ಶನಿವಾರ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ “ಸಹಕಾರಿ ಬ್ಯಾಂಕ್ ರೈತರಿಗೆ ಸಂಕಷ್ಟದ ಸಮಯದಲ್ಲಿ ನೆರವಾಗಲಿದ್ದು ಸಾಲ ಪಡೆದ ರೈತರು ಅದನ್ನು ಮೂಲ ಉದ್ದೇಶಕ್ಕೆ ಬಳಸಿ ಆರ್ಥಿಕವಾಗಿ ಸಬಲರಾಗಿ ಮರುಪಾವತಿ ಮಾಡಿ” ಎಂದು ತಿಳಿಸಿದರು.
ಸಭೆಯಲ್ಲಿ ಕಾಸ್ಕರ್ಡ್ ಬ್ಯಾಂಕ್‌ನ ಜಿಲ್ಲಾ ನಿರ್ದೇಶಕ ಯಲವಾರ ಸೊಣ್ಣೇಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷೆ ಬಿ.ಎಚ್.ಜ್ಞಾನೇಶ್ವರಿ ಅರುಣ್ ಕುಮಾರ್, ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಮರಳೂರು ಹನುಮಂತರೆಡ್ಡಿ, ಉಪಾಧ್ಯಕ್ಷೆ ಕೆ.ಶಶಿಕಲ, ನಿರ್ದೇಶಕ ಮುದ್ದುಗಂಗಮ್ಮ, ಟಿ.ಎಂ.ಚಿಕ್ಕಣ್ಣ, ಕೆ.ಎನ್.ವೆಂಕಟರಾಮರೆಡ್ಡಿ, ಸಿ.ಎನ್.ಲಕ್ಷ್ಮಿನಾರಾಯಣ ರೆಡ್ಡಿ, ಸಿ.ನಾರಾಯಣಗೌಡ, ವಿ.ಮಂಜುನಾಥ್, ಸಿ.ಎನ್.ಪ್ರಕಾಶ್, ಎಚ್.ಎಂ. ಶಿವಶಂಕರ್, ಎನ್.ಎಸ್.ರವಿಚಂದ್ರರೆಡ್ಡಿ, ಬಿ.ಎನ್.ಲಕ್ಷ್ಮಿಪತಿ, ವ್ಯವಸ್ಥಾಪಕಿ ಜಿ.ಆರ್.ಮೀನಾಕ್ಷಿ ಮುಂತಾದವರು ಉಪಸ್ಥಿತರಿದ್ದರು.