Chintamani : ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ (Murugamalla) ಹೋಬಳಿಯ ಗುಡಾರ್ಲಹಳ್ಳಿ (Gudarlahalli) ಗ್ರಾಮದಲ್ಲಿ ₹15 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು (New Dairy Building) ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ( M C Sudhakar) ಉದ್ಘಾಟಿಸಿದರು (Inauguration).
ಕಾರ್ಯಕರಮದಲ್ಲಿ ಮಾತನಾಡಿದ ಸಚಿವರು “ತಾಲ್ಲೂಕಿನಲ್ಲಿ ಮುಜರಾಯಿ ದೇವಸ್ಥಾನದ ಜಮೀನು, ಸಣ್ಣ ನೀರಾವರಿ ಇಲಾಖೆಯ ಕೆರೆ, ಕಲ್ಲುಬಂಡೆ ಬೆಟ್ಟಗಳನ್ನು ಸೇರಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ನೀಡಿದ್ದ ಒಟ್ಟು 1,893 ಹೆಕ್ಟೇರ್ ಭೂಮಿಯನ್ನು ಡೀಮ್ಡ್ ಅರಣ್ಯಕ್ಕೆ ಅಂದಿನ ಜಿಲ್ಲಾಧಿಕಾರಿ, ತಹಶೀಲ್ದಾರ್, ಕಂದಾಯ ನಿರೀಕ್ಷಕರು ಸೇರಿದಂತೆ ಎಲ್ಲ ಅಧಿಕಾರಿಗಳ ಮತ್ತು ಚುನಾಯಿತ ಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಸೇರಿಸಲಾಗಿದೆ. ತಾಲ್ಲೂಕಿನ ಚಿನ್ನಸಂದ್ರ ಕೆರೆಗೆ ಎತ್ತಿನಹೊಳೆ ನೀರು ಹರಿಸಿ ಅಲ್ಲಿಂದ ನಗರಕ್ಕೆ ನೀರು ಸರಬರಾಜು ಮಾಡಲು ಯೋಜನೆ ರೂಪಿಸಲಾಗಿತ್ತು. ತಳಗವಾರದ ಸರ್ವೆ ನಂ.15 ಕೆರೆ, ಹೆಬ್ಬರಿ ಕೆರೆ, ದೊಡ್ಡಗಂಜೂರು ಕೆರೆ ಸೇರಿ 24 ಕೆರೆಗಳನ್ನು ಡೀಮ್ಡ್ ಅರಣ್ಯಕ್ಕೆ ಸೇರಿಸಿದ್ದಾರೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೋಚಿಮುಲ್ ನಿರ್ದೇಶಕ ಅಶ್ವತ್ಥನಾರಾಯಣ ಬಾಬು, ಡೇರಿ ಅಧ್ಯಕ್ಷ ವಿ.ಮಂಜುನಾಥರೆಡ್ಡಿ, ಉಪಾಧ್ಯಕ್ಷ ಚನ್ನಕೇಶವರೆಡ್ಡಿ, ನಿರ್ದೇಶಕ ಎಲ್.ಕೃಷ್ಣಪ್ಪ, ಸೊಣ್ಣಪ್ಪರೆಡ್ಡಿ, ಶಿವಾರೆಡ್ಡಿ, ಜಿ.ಎನ್.ರಮೇಶ್, ವೆಂಕಟರೆಡ್ಡಿ, ಬಿ.ಆನಂದ್, ಜಿ.ಎಂ.ಶ್ರೀನಿವಾಸ್, ನಾರಾಯಣಸ್ವಾಮಿ, ಮಂಜುಳ, ರಾಧಮ್ಮ ಮತ್ತಿತರರು ಉಪತಿತರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur